ಪ್ರಮುಖ ಸುದ್ದಿ

ಹೆಚ್.ಡಿ .ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಎಲ್ಲರ ಫೋನ್ ಟ್ರ್ಯಾಪಿಂಗ್ ಆಗಿದೆ : ಬಿಜೆಪಿ ಶಾಸಕ ರೇಣುಕಾಚಾರ್ಯ ಆರೋಪ

ರಾಜ್ಯ(ಬೆಂಗಳೂರು)ಆ.14:- ಹೆಚ್.ಡಿ .ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಎಲ್ಲರ ಫೋನ್ ಟ್ರ್ಯಾಪಿಂಗ್ ಆಗಿದೆ. ನನ್ನ ಫೋನ್ ಸಹ ಟ್ರ್ಯಾಪ್ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಆರೋಪಿಸಿದ್ದಾರೆ.

ಫೋನ್ ಕದ್ದಾಲಿಕೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕ ಎಂ.ಪಿ ರೇಣುಕಾಚಾರ್ಯ, “ಮೈತ್ರಿ ಸರ್ಕಾರದ ಆಡಳಿತವಿದ್ದಾಗ ನನ್ನ ಫೋನನ್ನೂ ಟ್ರ್ಯಾಪ್ ಮಾಡಿದ್ದರು. “ಕುಮಾರಸ್ವಾಮಿ ನನ್ನ ಹಾಗೂ ಹಲವರ ಫೋನ್ ಟ್ರ್ಯಾಪ್ ಮಾಡಿದ್ದಾರೆ. ಸಿದ್ದರಾಮಯ್ಯ ಫೋನ್ ಸಹ ಟ್ರ್ಯಾಪ್ ಆಗಿದೆ” ಎಂದು ಆರೋಪಿಸಿದ್ದಾರೆ.

ಫೋನ್ ಟ್ರ್ಯಾಪಿಂಗ್ ಬಗ್ಗೆ ತನಿಖೆಗೆ ಮುಖ್ಯಮಂತ್ರಿ ಅವರಿಗೆ ಒತ್ತಾಯ ಮಾಡುತ್ತೇವೆ. ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸುತ್ತೇವೆ. ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ರೇಣುಕಾಚಾರ್ಯ ತಿಳಿಸಿದರು. ಹಾಗೆಯೇ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಆದರೆ ಸಚಿವ ಸ್ಥಾನ ನೀಡಿದರೆ ನಿಭಾಯಿಸುತ್ತೇನೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: