ದೇಶಪ್ರಮುಖ ಸುದ್ದಿ

ಬಿಹಾರ ಸರ್ಕಾರಿ ನೌಕರರು ರಾಜ್ಯದ ಹೊರಗೂ ಮದ್ಯ ಸೇವನೆ ಮಾಡುವಂತಿಲ್ಲ !

ಪಾಟ್ನಾ: ರಾಜ್ಯ ಸರ್ಕಾರಿ ನೌಕರರ ಸೇವಾ ನಿಯಮಗಳಿಗೆ ತಿದ್ದುಪಡಿ ತರುವ ಪ್ರಸ್ತಾವನೆಗೆ ಬಿಹಾರ ಸರ್ಕಾರ ಒಪ್ಪಿಗೆ ನೀಡಿದೆ. ಈ ಪ್ರಕಾರ ಸರ್ಕಾರಿ ನೌಕರರು ಇನ್ನು ಮುಂದೆ ಯಾವುದೇ ಸ್ಥಳಗಳಲ್ಲಿ ಮದ್ಯ ಹಾಗೂ ಮಾದಕ ವಸ್ತು ಸೇವನೆ ಮಾಡುವಂತಿಲ್ಲ ! ಹೌದು, ಸ್ವಲ್ಪ ಆಶ್ವರ್ಯವೆನಿಸಿದರೂ ಇದು ಸತ್ಯ !
“ಬಿಹಾರ ಸರ್ಕಾರಿ ಸೇವಕರ ನೀತಿ ನಿಯಮಗಳು-1976” ಮತ್ತು “ಬಿಹಾರ ನ್ಯಾಯಾಂಗ ಅಧಿಕಾರಿಗಳ ನೀತಿ ನಿಯಮಗಳು-2017″ಕ್ಕೆ ತಿದ್ದುಪಡಿ ತರಲು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.
ಈರ ಇರುವ ಬಿಹಾರ ಸರ್ಕಾರಿ ನೌಕರರ ಸೇವಾ ನಿಯಮಗಳ ಪ್ರಕಾರ, ಸರ್ಕಾರಿ ನೌಕರರು ಕರ್ತವ್ಯದಲ್ಲಿರುವಾಗ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಮಲೇರಿಸುವ ಪದಾರ್ಥಗಳು ಮತ್ತು ಮಾದಕ ವಸ್ತುಗಳನ್ನು ಸೇವಿಸುವಂತಿಲ್ಲ. ಇದೀಗ ತಿದ್ದುಪಡಿಯಲ್ಲಿ ಎರಡು ಹೊಸ ಅಂಶಗಳನ್ನು ಪರಿಚಯಿಸಲಾಗಿದ್ದು, ಯಾವುದೇ ಸರ್ಕಾರಿ ನೌಕರರು ಮಾದಕ ವಸ್ತು ಅಥವಾ ಅಮಲು ಪದಾರ್ಥಗಳನ್ನು ಸೇವಿಸುವಂತಿಲ್ಲ. ಸರ್ಕಾರಿ ನೌಕರರು ಎಲ್ಲಿಗೆ ಹೋದರೂ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಪತ್ತೆ ಕಾರ್ಯ ಹೇಗೆ?

ರಾಜ್ಯದಿಂದ ಹೊರಗೆ ಹೋಗಿ ಮದ್ಯ ಸೇವನೆ ಮಾಡಿದರೆ ಹೇಗೆ ಕಂಡುಹಿಡಿಯುತ್ತೀರಿ ಎಂಬ ಪ್ರಶ್ನೆಗೆ, ವೈದ್ಯಕೀಯ ಪರೀಕ್ಷೆ, ಸಾಮಾಜಿಕ ಜಾಲತಾಣ, ಸ್ಟಿಂಗ್ ಆಪರೇಶನ್ ಮೂಲಕ ಸತತ ನಿಗಾ ಇಡಲಾಗುತ್ತದೆ. ಮಾಹಿತಿ ಸಿಕ್ಕ ಕೂಡಲೇ ಅಧಿಕಾರಿಗಳು ತಕ್ಷಣ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ನ್ಯಾಯಾಂಗದ ನೌಕರರಿಗೂ ಸಹ ಇವೇ ನಿಯಮಗಳು ಅನ್ವಯವಾಗಲಿವೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಆರಂಭದಲ್ಲಿ ದಂಡ ಹಾಕುವುದರಿಂದ ಹಿಡಿದು ಸೇವೆಯಿಂದ ಅಮಾನತು ಮಾಡುವುದು, ಸೇವೆಯಿಂದ ವಜಾ ಮಾಡುವ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Leave a Reply

comments

Related Articles

error: