ಮೈಸೂರು

ನೊಂದ ಜೀವಗಳಿಗೆ ನಿಮ್ಮ ಅಭಯ ಹಸ್ತ ಕಾಲ್ನಡಿಗೆ ಜಾಥಾ

ಮೈಸೂರು,ಆ.14:-  ಕರ್ನಾಟಕದ ನೆರೆ ಸಂತ್ರಸ್ತರಿಗೆ ನೆರೆವಾಗುವ ನಿಟ್ಟಿನಲ್ಲಿ ಪ್ರಜಾಭಾರತ ಅಭಿಯಾನ ನೊಂದ ಜೀವಗಳಿಗೆ ನಿಮ್ಮ ಅಭಯ ಹಸ್ತ ಕಾರ್ಯಕ್ರಮ ಇಂದು  ನಗರದ ಅಗ್ರಹಾರ ವೃತ್ತದಿಂದ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿತ್ತು.
ಇತಿಹಾಸ ತಜ್ಞ  ಪ್ರೊ. ನಂಜರಾಜೇ ಅರಸ್,  ದೀಪಕ್  ಪತ್ರಕರ್ತ, ಹಿರಿಯ ಹೋರಾಟಗಾರರಾದ ಸತ್ಯಪ್ಪ , ನಾಲ್ವಡಿ ಫೌಂಡೇಷನ್ ಅಧ್ಯಕ್ಷರಾದ  ನಂದೀಶ್ ಅರಸ್ , ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಅರವಿಂದ್ ಶರ್ಮ , ಕನ್ನಡ ಕ್ರಾತಿದಳ ಯುವಘಟಕದ ಅಧ್ಯಕ್ಷರಾದ ತೇಜಸ್ವಿ ಕುಮಾರ್  ಹಾಗೂ ಕನ್ನಡ ಹೋರಾಟಗಾರರ ನೇತೃತ್ವದಲ್ಲಿ ನೆರೆ ಸಂತ್ರಸ್ಥ ರಿಗೆ ಆಹಾರ ಮತ್ತು ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ನೆರೆ ಸಂತ್ರಸ್ಥರಿಗೆ ತಲುಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: