ಕರ್ನಾಟಕದೇಶಪ್ರಮುಖ ಸುದ್ದಿ

ಕಾವೇರಿ ನೀರಿಗಾಗಿ ಮತ್ತೆ ಬೇಡಿಕೆ ಇಟ್ಟ ತಮಿಳುನಾಡು

ನವದೆಹಲಿ : ಇಂದು ನಡೆದ ಕಾವೇರಿ ಮೇಲುಸ್ತುವರಿ ಸಮಿತಿ ಸಭೆಯಲ್ಲಿ ಕಾವೇರಿ ನೀಡು ಬಿಡುಗಡೆಗೆ ಮನವಿ ಮಾಡುವ ಮೂಲಕ ತಮಿಳುನಾಡು ಮತತೆ ಕರ್ನಾಟಕದ ವಿರುದ್ಧ ತಕರಾರು ಎತ್ತಿದೆ.
ಈ ಹಂಗಾಮಿನಲ್ಲಿ ಬಿಡುಗಡೆ ಮಾಡಬೇಕಾದ ಬಾಕಿ ಉಳಿದ ಕಾವೇರಿ ನದಿ ನೀರನ್ನ ಬಿಡುಗಡೆ ಮಾಡುವಂತೆ ತಮಿಳುನಾಡು ಈ ತಕರಾರು ಸಲ್ಲಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕದ ಅಧಿಕಾರಿಗಳು, ಕರ್ನಾಟಕ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ನೀರಿನ ಕೊರತೆ ಇದೆ. ಸದ್ಯದ ಸಂದರ್ಭದಲ್ಲಿ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ತಮಿಳುನಾಡಿನ ಬೇಡಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ದೆಹಲಿಯ ಶ್ರಮಶಕ್ತಿ ಭವನದಲ್ಲಿ ನಡೆದ ಮೇಲುಸ್ತುವಾರಿ ಸಭೆಯಲ್ಲಿ ಕಾವೇರಿ ಜಲಾನಯನ ಪ್ರದೇಶ ಹೊಂದಿರುವ ಕರ್ನಾಟಕ, ತಮಿಳುನಾಡು, ಪುದುಚೆರಿ, ಕೇರಳ – ಈ 4 ರಾಜ್ಯಗಳ ಕಾರ್ಯದರ್ಶಿಗಳೂ ಭಾಗಿಯಾಗಿದ್ದರು. ಕರ್ನಾಟಕ ಪರ ಮುಖ್ಯಕಾರ್ಯದರ್ಶಿ ಸುಭಾಷ್​ಚಂದ್ರ ಕುಂಟಿಯಾ ಸಭೆಯಲ್ಲಿದ್ದರು.

Leave a Reply

comments

Related Articles

error: