ಮೈಸೂರು

ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಮೈಸೂರು ಯೋಗಶಾಲಾ ವತಿಯಿಂದ ದಶಮಾನೋತ್ಸವ ಹಾಗೂ ಶರನ್ನವರಾತ್ರಿ ಪ್ರಯುಕ್ತ ಯೋಗಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಆರು ಸಾಧಕರಿಗೆ ಸೆ.24 ರ ಬೆ,11 ಗಂಟೆಗೆ ನಗರದ ಪತ್ರಕರ್ತರ ಭವನದಲ್ಲಿ “ಮೈಸೂರು ಯೋಗ ಸೇವಾರತ್ನ” ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾಡಲಾಯಿತು.

ಕಾರ್ಯಕ್ರಮದಲ್ ಸಾನಿಧ್ಯವನ್ನು ಮೇಲುಕೋಟೆಯ ವಂಗೀಪುರ ಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಸಮಾಜ ಸೇವಕ ಹಾಗೂ ಸಂಸ್ಕೃತಿ ಪೋಷಕ ಕೆ.ರಘುರಾಂ, ಜಿಎಸ್ಎಸ್ ಫೌಂಡೇಶನ್ ಸಂಸ್ಥಾಪಕ ಶ್ರೀಹರಿ, ನಗರ ಪಾಲಿಕೆ ಸದಸ‍್ಯ ಬಿ.ವಿ. ಮಂಜುನಾಥ್ ಹಾಜರಿದ್ದರು.

ನಂತರ ಮೈಸೂರು ಯೋಗ ಇನ್ಸ್ಟಿಟ್ಯೂಟ್ ನ ಸಂಸ್ಥಾಪಕ ಹೆಚ್.ಜಿ,ಹಿರಣ್ಣಯ್ಯ, ಅಷ್ಠಾಂಗ ಯೋಗ ವಿನ್ಯಾಸ ಕೇಂದ್ರದ ಸಂಸ್ಥಾಪಕ ಸಿ.ರಮೇಶ್, ಚೈತನ್ಯ ಯೋಗ ಕೇಂದ್ರದ ಸಂಸ್ಥಾಪಕ ಬಿ.ಪಿ.ಮೂರ್ತಿ, ಪೊಲೀಸ್ ಪಬ್ಲಿಕ್ ಶಾಲೆಯ ಯೋಗ ಶಿಕ್ಷಕ ಪೊಲೀಸ್ ನಾಗಭೂಷಣ್, ಶ್ರೀ ರಾಘವೇಂದ್ರ ಯೋಗ ಕೇಂದ್ರದ ಸಂಸ್ಥಾಪಕ ಎನ್.ಪಶುಪತಿ ಮತ್ತು ಶ್ರೀ ಪತಂಜಲಿ ಯೋಗಾಶ್ರಮ ಟ್ರಸ್ಟ್ ನ ಉಪಾಧ್ಯಕ್ಷ  ಪಿ.ಆರ್.ವಿಶ್ವನಾಥ್ ಶೆಟ್ಟಿ ಇವರಿಗೆ  ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶ‍್ರೀ ಇಳೈ ಆಳ್ವಾರ್  ಸ್ವಾಮೀಜಿ ಯೋಗ ಸಾಧಕರಿಗೆ ಸನ್ಮಾನ ಮಾಡಿ ಮಾತನಾಡಿದ ಅವರು, ಪ್ರತಿವರ್ಷ ಇದೇ ರೀತಿ  ಈ ಸಂಸ್ಥೆಯಿಂದ ಯೋಗ ಸಾಧಕರಿಗೆ ಸನ್ಮಾನ ಮಾಡಲಿ ಎಂದು ಹರಸಿದರು. ಕೆ.ರಘುರಾಂ ಮಾತನಾಡಿ ಯೋಗ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ನೀಡುತ್ತದೆ ಎಂದು ಹೇಳಿದರು.

Leave a Reply

comments

Related Articles

error: