ಮೈಸೂರು

‘ಯುವಕರು ದೇಶ ಕಟ್ಟುವಲ್ಲಿ ಮುಂದಾಗಬೇಕು’: ಮಾಜಿ ಕುಲಪತಿಡಾ.ಟಿ.ಕೆ.ಉಮೇಶ್

ಶಾರದಾ ವಿಲಾಸ ವಿದ್ಯಾಸಂಸ್ಥೆಯಕ್ರೀಡಾಂಗಣದಲ್ಲಿಂದು 73ನೇ ಸ್ವಾತಂತ್ರ್ಯ ದಿನಾಚರಣೆ

ಮೈಸೂರು, ಆ.15:- ನಗರದ ಶಾರದಾ ವಿಲಾಸ ವಿದ್ಯಾಸಂಸ್ಥೆಯಕ್ರೀಡಾಂಗಣದಲ್ಲಿಂದು 73ನೇ ಸ್ವಾತಂತ್ರ್ಯ ದಿನಾಚರಣೆಯನ್ನುಆಚರಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ಪ್ರಭಾರ ಮಾಜಿ ಕುಲಪತಿಗಳಾದ ಡಾ.ಟಿ.ಕೆ.ಉಮೇಶ್‍  ಮಾತನಾಡಿ, ಇಂದಿನ ಯುವಕರು ದೇಶ ಕಟ್ಟುವಲ್ಲಿ ಮುಂದಾಗಬೇಕು.ಇಂದಿನ ವಿದ್ಯಾರ್ಥಿಗಳೇ ಮುಂದಿನ ಸಮಾಜದ ಸತ್ಪ್ರಜೆಗಳು. ಆದ್ದರಿಂದ ದೇಶಾಭಿಮಾನವನ್ನು ಬೆಳೆಸಿಕೊಂಡು ವಿದ್ಯಾಭ್ಯಾಸವನ್ನು ಮುಂದುವರೆಸಬೇಕೆಂದು ಸಲಹೆ ನೀಡಿದರು, ಯುವಕರು ಯಶಸ್ಸು ಕಾಣಲು ಕಠಿಣ ಪರಿಶ್ರಮ ಅಗತ್ಯ. ಏಕೆಂದರೆ ಸ್ವಾತಂತ್ರ್ಯ ಸೇನಾನಿಗಳು ಕಠಿಣ ಶ್ರಮದ ಫಲವಾಗಿ, ತ್ಯಾಗ ಬಲಿದಾನದ ಅನುಕ್ರಮವಾಗಿ ಇಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆಂದು ಅಭಿಪ್ರಾಯಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಬಿ.ಎಸ್.ಪಾರ್ಥಸಾರಥಿಯವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಯುವಶಕ್ತಿ ನಮ್ಮದೇಶದ ಆಸ್ತಿ. ಆದ್ದರಿಂದ ಯುವ ಮನಸ್ಸುಗಳು ಒಂದಾಗಿ ಸಮಾಜದ ಏಳಿಗೆಗೆ ಶ್ರಮಿಸಬೇಕೆಂದು ಕರೆ ನೀಡಿದರು.

ಸಮಾರಂಭದಲ್ಲಿ ಸಂಸ್ಥೆಯಗೌರವ ಕಾರ್ಯದರ್ಶಿ ಹೆಚ್.ಕೆ.ಶ್ರೀನಾಥ್, ಆಡಳಿತ ಮಂಡಳಿ ಸದಸ್ಯರಾದ ವೈ.ಕೆ.ಭಾಸ್ಕರ್, ಎಸ್.ನಾಗರಾಜು, ಎಂ.ಬಿ.ಡೋಂಗ್ರೆ, ಹರೀಶ್ ಉಪಸ್ಥಿತರಿದ್ದರು. ಕಳೆದ 30 ವರ್ಷಗಳಿಗೂ ಮಿಗಿಲಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರನ್ನುಇದೇ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.ವೇದಿಕೆ ಕಾರ್ಯಕ್ರಮದ ನಂತರ ದೇಶಾಭಿಮಾನದ ನೃತ್ಯ ಹಾಗೂ ಗೀತೆಗಳೊಂದಿಗೆ ಸ್ವಾತಂತ್ರ್ಯೋತ್ಸವವು ಸಂಭ್ರಮ, ಸಡಗರದಿಂದ ನೆರವೇರಿತು. ಸಮಾರಂಭಕ್ಕೆ ಡಾ.ಜೋತಿ ಸ್ವಾಗತಿಸಿದರೆ, ಡಾ.ಸತ್ಯನಾರಾಯಣ ವಂದಿಸಿದರು. ಡಾ.ವಿಮಲಶ್ರೀ, ಡಾ.ವಿಶ್ವನಾಥ್, ಶಿಕ್ಷಕರಾದ ವೆಂಕಟರಮಣ ಭಟ್‍ ಕಾರ್ಯಕ್ರಮ ನಿರೂಪಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: