ಮೈಸೂರು

ದಸರಾ ಗಜ ಪಯಣಕ್ಕೆ ದಿನಾಂಕ ನಿಗದಿ : ಆಗಸ್ಟ್ 22ಕ್ಕೆ ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕಲಿವೆ ದಸರಾ ಗಜಪಡೆ

ಮೈಸೂರು,ಆ.16:- ವಿಶ್ವವಿಖ್ಯಾತ ಮೈಸೂರು ದಸರಾ 2019ಕ್ಕೆ ಈಗಲೇ ಸಿದ್ಧತೆ ಆರಂಭವಾಗಿದ್ದು, ದಸರಾ ಗಜಪಯಣಕ್ಕೆ ದಿನಾಂಕ ನಿಗದಿಯಾಗಿದೆ.

ಆಗಸ್ಟ್ 22ಕ್ಕೆ ಕಾಡಿನಿಂದ ನಾಡಿನತ್ತ   ದಸರಾ ಗಜಪಡೆ ಹೆಜ್ಜೆ ಹಾಕಲಿದ್ದು, ಹುಣಸೂರು ತಾಲೂಕಿನ ವೀರನಹೊಸಳ್ಳಿಯಿಂದ ಮೈಸೂರು ಅರಮನೆಗೆ ದಸರಾ ಗಜಪಡೆ ಬರಲಿದೆ.

ಆಗಸ್ಟ್ 22ರ ಬೆಳಿಗ್ಗೆ 10.30ಕ್ಕೆ ಗಜಪಯಣಕ್ಕೆ ಚಾಲನೆ ನೀಡಲಾಗುತ್ತಿದ್ದು, ದಸರಾ ಗಜ ಪಡೆಯ ಮೊದಲ ತಂಡದ ಗಜ ಪಯಣದಲ್ಲಿ  ಆರು ಆನೆಗಳು ಗಜಪಯಣದ ಮೂಲಕ ಅರಮನೆಗೆ ಬರಲಿವೆ. ಅಂಬಾರಿ ಸಾರಥಿ ಅರ್ಜುನ ನೇತೃತ್ವದ ಆರು ಆನೆಗಳಿಗೆ ಪೂಜೆ ಸಲ್ಲಿಸಿ ಗಣ್ಯರ ಸಮ್ಮುಖದಲ್ಲಿ ಅರಣ್ಯ ಇಲಾಖೆ ಗಜಪಯಣಕ್ಕೆ ಚಾಲನೆ ನೀಡಲಿದೆ. ಗಜಪಯಣದ ಮೂಲಕ ಮೈಸೂರು ದಸರಾ ಸಿದ್ದತೆಗಳು ಆರಂಭವಾಗಲಿದೆ.

ಮೈಸೂರು ದಸರಾಗೆ  ಈ ಬಾರಿ 14 ಆನೆಗಳು ಪಾಲ್ಗೊಳ್ಳಲಿದ್ದು, ಎರಡು ತಂಡಗಳಾಗಿ ಮೈಸೂರಿಗೆ ಬರಲಿವೆ. ಮೊದಲ ತಂಡದಲ್ಲಿ 6 ಆನೆಗಳು ಬರಲಿದ್ದು, ಎರಡನೆ ತಂಡದಲ್ಲಿ 8 ಆನೆಗಳು ಬರಲಿವೆ. ಎರಡು ಆನೆಗಳು ಹೆಚ್ಚುವರಿಯಾಗಿ ದಸರಾದಲ್ಲಿ ಭಾಗಿಯಾಗಲಿವೆ. ಹೆಚ್ಚುವರಿ ಆನೆಗಳು ಎರಡನೆ ತಂಡದಲ್ಲಿ ಆಗಮಿಸಲಿದ್ದು, ಆಗಸ್ಟ್ 22ಕ್ಕೆ ಮೊದಲ ತಂಡದ ಆನೆಗಳ ಆಗಮನ‌ವಾಗಲಿದೆ.

ಸೆಪ್ಟೆಂಬರ್ ಮೊದಲ ವಾರದಲ್ಲಿ ಎರಡನೆ ತಂಡದ ಆನೆಗಳು ಆಗಮಿಸಲಿವೆ.   ಅರ್ಜುನ (59)   ಬಳ್ಳೆ ಆನೆ ಶಿಬಿರ, ಬಲರಾಮ (61 ) ಮತ್ತಿಗೋಡು ಆನೆ ಶಿಬಿರ, ಅಭಿಮನ್ಯು ( 53 ) ಮತ್ತಿಗೋಡು ಆನೆ ಶಿಬಿರ, ವರಲಕ್ಷೀ (63) ಮತ್ತಿಗೋಡು ಆನೆ ಶಿಬಿರ, ಕಾವೇರಿ ( 41)- ದುಬಾರೆ ಆನೆ ಶಿಬಿರ, ವಿಜಯ (62)- ದುಬಾರೆ ಆನೆ ಶಿಬಿರ, ವಿಕ್ರಮ (46), ದುಬಾರೆ ಆನೆ ಶಿಬಿರ, ಗೋಪಿ (37) ದುಬಾರೆ ಆನೆ ಶಿಬಿರ, ಧನಂಜಯ( 36) ದುಬಾರೆ ಆನೆ ಶಿಬಿರ, ಈಶ್ವರ( 49) ದುಬಾರೆ ಆನೆ ಶಿಬಿರ,  ದುರ್ಗಾಪರಮೇಶ್ವರಿ( 52) ಕೆ.ಗುಡಿ ಆನೆ ಶಿಬಿರ,  ಜಯಪ್ರಕಾಶ್ (57) ರಾಂಪುರ ಆನೆ ಶಿಬಿರ , ಹೆಚ್ಚುವರಿಯಾಗಿರುವ ಎರಡು ಆನೆಗಳು ಲಕ್ಷೀ (17 ) ಬಂಡಿಪುರ ಹುಲಿ ಸಂರಕ್ಷಿತ ಅರಣ್ಯ, ರೋಹಿತ್(19 ) ಬಂಡಿಪುರ ಹುಲಿ ಸಂರಕ್ಷಕ ಅರಣ್ಯ ದಿಂದ ಪಾಲ್ಗೊಳ್ಳಲಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: