ಪ್ರಮುಖ ಸುದ್ದಿಮೈಸೂರು

ಮೈಮ್ ತಂಡದಿಂದ ‘ದಿ ಕೋರ್ಟ್ ಮಾರ್ಯಲ್’ ನಾಟಕ

ವಾರಾಂತ್ಯದಲ್ಲಿ ನಾಲ್ಕು ದಿನಗಳ ಕಾಲ

ಮೈಸೂರು. ಆ.16: ಹಿರಿಯ ಕವಿ ಸಿದ್ದಲಿಂಗ ಪಟ್ಟಣಶೆಟ್ಟಿ ಕನ್ನಡ ಅನುವಾದಿತ “ದಿ ಕೋರ್ಟ್ ಮಾರ್ಯಲ್” ನಾಟಕವನ್ನು ಮೈಸೂರು ಮೈಮ್ ತಂಡವು ಪ್ರದರ್ಶಿಸುವುದು ಎಂದು ತಂಡದ ನಿರ್ದೇಶಕ ಜಿ.ಪಿ.ಗೌತಮ್ ತಿಳಿಸಿದರು.

ಈ ತಿಂಗಳ ವಾರಾಂತ್ಯದಲ್ಲಿ ಅಂದ್ರೆ 17. 18 ಹಾಗೂ ಹಾಗೂ 24 ಮತ್ತು 25 ರಂದು ಕಲಾಮಂದಿರದ ಕಿರು ರಂಗಮಂದಿರದಲ್ಲಿ ಸಂಜೆ 6.45 ಕ್ಕೆ ಪ್ರದರ್ಶನಗೊಳಿಸಲಾಗುವುದು. ಮರಾಠಿ ‌ಮೂಲದ ಈ ನಾಟಕವನ್ನು ರಂಗಾಯಣದ ಹಿರಿಯ ಕಲಾವಿದ ಎಸ್ ರಾಮು ತೆರೆ ಮೇಲೆ ಪ್ರಸ್ತುತ ಪಡಿಸಲಿರುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಿರ್ದೇಶಕ ಎಸ್ ರಾಮು ಮಾತನಾಡಿ, ಮೈಸೂರು ಮೈಮ್ ಟೀಮ್ ಕಳೆದ ಮೂರು ವರ್ಷಗಳಿ.ದ ಪ್ರತಿದಿನ ಬೆಳಗ್ಗೆ   6.45 ರಿಂದ 8.15ರವರೆಗೆ ಹವ್ಯಾಸಿ ರಂಗ ಕಲಾವಿದರಿಗೆ ಉಚಿತವಾಗಿ ಆಂಗಿಕ ತರಬೇತಿಯನ್ನು ಮಾನಸ ಗಂಗೋತ್ರಿಯ ಗಾಂಧಿಭವನದ‌ ಬಯಲು ರಂಗಮಂದಿರದಲ್ಲಿ ನೀಡಲಾಗುತ್ತದೆ. ತಂಡವು ಈಗಾಗಲೇ ಸನ್ಮಾನಬೇಕಾ, ನನಗ್ಯಾಕೋ ಡೌಟು ನಾಟಕಗಳನ್ನು ಪ್ರದರ್ಶಿಸಲಾಗಿದೆ ಯಶಸ್ವಿಯಾಗಿದೆ ಎಂದು ತಿಳಿಸಿದರು.

ದಿ ಕೋರ್ಟ್ ಮಾರ್ಯಲ್ ನಾಟಕವು ಸ್ವದೇಶ್ ದೀಪಕ್ ರಚನೆಯ ಮರಾಠಿ ಮೂಲವಾಗಿದೆ. ಮರಾಠಿಯಲ್ಲಿ ಯಶಸ್ವಿ ಪ್ರದರ್ಶನ ಕಂಡಿದ್ದು, ನಾಟಕಕ್ಕೆ ಸುಮಾರು 80.ರೂ.ಗಳ ಪ್ರವೇಶ ದರವಿದೆ ಎಂದರು.

ನಾಟಕ ಸಂಗೀತ ನಿರ್ದೇಶಕಿ ಶೋಭಾ ಸೋಮಸುಂದರ್. ಬಿ.ಅರ್.ನಾಗೇಶ್ ಇತರರು ಗೋಷ್ಠಿಯಲ್ಲಿ ಇದ್ದರು.( ವರದಿ : ಕೆ.ಎಂ‌.ಆರ್)

Leave a Reply

comments

Related Articles

error: