ಮೈಸೂರು

ಆಗಸ್ಟ್ 18 : ಶ್ರೀ ಗಣಪತಿ ಸಚ್ಚಿದಾನಂದ  ಆಶ್ರಮದ  ನಾದಾ ಮಂಟಪದಲ್ಲಿ ‘ಮಹಾ ಶತಾವಧಾನ್’

ಮೈಸೂರು,ಆ.16:- ಸುಮತಿನಾಥ್ ಜೈನ್ ಸಂಘದ ವತಿಯಿಂದ ‘ಮಹಾ ಶತಾವಧಾನ್’  ಕಾರ್ಯಕ್ರಮ ಕುರಿತು  ಮಾಹಿತಿ ನೀಡಲು ಸುದ್ದಿಗೋಷ್ಠಿ ಯನ್ನು ಏರ್ಪಡಿಸಲಾಗಿತ್ತು.

ಆಗಸ್ಟ್ 18 ರಂದು ಶ್ರೀ ಗಣಪತಿ ಸಚ್ಚಿದಾನಂದ  ಆಶ್ರಮದ  ನಾದಾ ಮಂಟಪದಲ್ಲಿ  ಬೆಳಿಗ್ಗೆ 9 ಗೆ ‘ಮಹಾ ಶತಾವಧಾನ್’ ಅನ್ನು ಏರ್ಪಡಿಸಲಾಗಿದೆ.

ಪ್ರೇಕ್ಷಕರು ಕೇಳಿದ 200 ಪ್ರಶ್ನೆಗಳನ್ನು ಒಂದೇ ಅನುಕ್ರಮದಲ್ಲಿ ನೆನಪಿಸಿಕೊಳ್ಳುವುದು ಮತ್ತು ಉತ್ತರಿಸುವುದೇ ಈ  ಮಹಾ ಶತಾವಧಾನ್ ಅರ್ಥವಾಗಿದೆ.  ಸಂಗಮ್ ಥಿಯೇಟರ್ , ಚಂದ್ರ ಗುಪ್ತಾ ರಸ್ತೆಯಲ್ಲಿರುವ ಶ್ರೀ ಮಹಾವೀರ್ ಭವನದಲ್ಲಿ ಇಂದು ಆತ್ಮ ಜೈನ ಮುನಿ ಶ್ರೀ ನಾಯಚಂದ್ರ ಸಾಗರ್ ಜೀ ಅವರ ಶಿಷ್ಯ ಅಜಿತ್ ರತ್ನ ಸಾಗರಜೀ ಮಹಾರಾಜ್ ಮುನಿಗಳು  ಕಾರ್ಯಕ್ರಮದ ವಿವರ ನೀಡಿದರು.

ಅಜಿತ್ ರತ್ನ ಸಾಗರಜೀ ಮಹಾರಾಜ್ ಮುನಿಗಳು ಮುಂಬೈನಲ್ಲಿ 2014 ರಲ್ಲಿ  ಶತಾವಧಾನ್  ಆರಂಭಿಸಿದ್ದಾರೆ. ಈಗ ಅವರ ಶಿಷ್ಯ ಮೈಸೂರಿನಲ್ಲಿ  ಮುನಿಶ್ರೀ ಚಂದ್ರಪ್ರಭ್ ಚಂದ್ರ ಸಾಗರ್ಜಿ ಅವರು ಮೈಸೂರಿನಲ್ಲಿ 5 ವಿಭಿನ್ನ ಅಂಕಗಳಲ್ಲಿ 200 ಪ್ರಶ್ನೆಗಳನ್ನು  ಅಳವಡಿಸಿಕೊಳ್ಳುತ್ತಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅಶೋಕ್ ಜೈನ್ , ಟಿಕಮ್ ಚಂದ್ , ಬೆರೂ ಲಾಲ್ , ಶಾಂತಿ ಲಾಲ್ ಜೀ ಹರಣ್ , ಮಾಂಗಿಲಾಲ್ , ಪ್ರವೀಣ್ ಜೈನ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: