ಮೈಸೂರು

ಮೈಸೂರಿನಿಂದ ಜೀವಂತ ಹೃದಯ ಸೇರಿ ವಿವಿಧ ಅಂಗಾಗಗಳು ಬೆಂಗಳೂರಿಗೆ ರವಾನೆ

ಮೈಸೂರು, ಆ.16:- ಮೈಸೂರಿನಿಂದ ಮತ್ತೊಂದು ಜೀವಂತ ಹೃದಯ ಸೇರಿ ವಿವಿಧ ಅಂಗಾಗಳನ್ನಿಂದು ರವಾನೆ ಮಾಡಲಾಗಿದೆ.

ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಬೆಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ರವಾನೆ ಮಾಡಲಾಗಿದೆ. ಮೈಸೂರಿನ ನಾರಾಯಣ ಹೃದಯಾಲಯದ ವೈದ್ಯರು ಅಪೋಲೊ ಆಸ್ಪತ್ರೆಯಲ್ಲಿ  ಅಪರೇಷನ್ ನಡೆಸಿದ್ದು, ಮೈಸೂರಿನಿಂದ ಬೆಂಗಳೂರು ರಸ್ತೆ ಮಾರ್ಗವಾಗಿ ಮೂರು ಹಂತದಲ್ಲಿ  ಅಂಗಾಂಗ ರವಾನೆ ಮಾಡಲಾಗುತ್ತಿದ್ದು, ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ, ಶ್ವಾಸಕೋಶವನ್ನು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ, ಕಿಡ್ನಿಯನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಮೈಸೂರಿನಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್ ಮೂಲಕ ಅಂಗಾಂಗಳು ರವಾನೆಯಾಗಿದ್ದು, ರಸ್ತೆ ಅಪಘಾತದಿಂದ ಗಾಯಗೊಂಡು ಮೈಸೂರಿನ ಅಪೋಲೋ ಆಸ್ಪತ್ರೆಗೆ ಪಿರಿಯಾಪಟ್ಟಣ ತಾಲೂಕು ಸೂಳೇಕೋಟೆ ಗ್ರಾಮದ ನಿವಾಸಿ ಯುವಕ ಧರ್ಮ. ಎಸ್.ಎ (28) ಎಂಬಾತ ದಾಖಲಾಗಿದ್ದ. ಕುಶಾಲನಗರದಲ್ಲಿ ಸಲೂನ್ ನಡೆಸುತ್ತಿದ್ದ ಧರ್ಮ ಸಂಬಂಧಿಕರ ಸಾವಿಗೆ ಹೋಗಿ ಬರುವಾಗ ಚುಂಚನ ಕಟ್ಟೆ ಬಳಿ ಬೈಕ್ ಅಪಘಾತದಿಂದ ತಲೆಗೆ ಪೆಟ್ಟು ಬಿದ್ದು ಕೋಮಾಗೆ ಹೋಗಿದ್ದ. ಬದುಕುಳಿಯುವ ಸಾಧ್ಯತೆ ಕಡಿಮೆ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಮುಂದಾದರು ಎನ್ನಲಾಗಿದೆ.

ಸುಮಾರು 15 ಮಂದಿ ಸಿಬ್ಬಂದಿಗಳಿಂದ ಎರಡು ಗಂಟೆ ಅಪರೇಷನ್ ನಡೆದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: