ಮೈಸೂರು

ಕಲ್ಲಿನಿಂದ ಜಜ್ಜಿ ಕೊಲೆ : ದುಷ್ಕರ್ಮಿಗಳ ಪತ್ತೆಗೆ ಎರಡು ತಂಡ ರಚನೆ

ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಿಗ್ಗೆ ಮುಖವನ್ನು ಸಂಪೂರ್ಣ ಕಲ್ಲಿನಿಂದ ಜಜ್ಜಿದ, ರಕ್ತಸಿಕ್ತವಾದ ಶವವೊಂದು ಪತ್ತೆಯಾಗಿತ್ತು. ಇಂತಹ ಹೀನ ಕೃತ್ಯವೆಸಗಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಎರಡು ತಂಡ ರಚಿಸಲಾಗಿದ್ದು, ಪೊಲೀಸರು ಭರದಿಂದ ಶೋಧಕಾರ್ಯ ನಡೆಸಿದ್ದಾರೆ.

ಸುತ್ತಮುತ್ತಲಿನ ಸಿಸಿ ಕ್ಯಾಮರಾ ಫೂಟೇಜ್ ಗಳನ್ನು ಪರಿಶೀಲಿಸಲಾಗಿದ್ದು, ಇವನು ಯಾರು, ಯಾಕಾಗಿ ಬಂದಿದ್ದ, ಏನಕ್ಕಾಗಿ ಈ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ ಎಂಬ ಸಂಪೂರ್ಣ ಮಾಹಿತಿಯ ಜೊತೆ ಮೊಬೈಲ್ ಟವರ ಲೊಕೇಶನ್  ಕುರಿತು ಪೊಲೀಸರು ಸಂಪೂರ್ಣ ಮಾಹಿತಿ  ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ.  ಉದಯಗಿರಿ ಪೊಲೀಸ್ ಇನ್ಸಪೆಕ್ಟರ್ ಸಂತೋಷ್ ನೇತೃತ್ವದ ತಂಡ ಕಾರ್ಯಾಚರಣೆಗಿಳಿದಿದೆ.

Leave a Reply

comments

Related Articles

error: