ಮನರಂಜನೆ

ಮೊದಲ ದಿನವೇ 29.16ಕೋಟಿ ಗಳಿಸಿದ ಬಾಲಿವುಡ್ ನ ಆ್ಯಕ್ಷನ್ ಕಿಂಗ್,ಕನ್ನಡದ ಹಿರಿಯ ನಟ ದತ್ತಣ್ಣ ಅಭಿನಯದ  ‘ಮಿಷನ್ ಮಂಗಲ್’

ದೇಶ(ನವದೆಹಲಿ)ಆ.16:- ಬಾಲಿವುಡ್ ನ ಆ್ಯಕ್ಷನ್ ಕಿಂಗ್, ಖಿಲಾಡಿ ಅಕ್ಷಯ್ ಕುಮಾರ್, ಕನ್ನಡ ಚಿತ್ರರಂಗದ ಹಿರಿಯ ನಟ ದತ್ತಣ್ಣ ಅಭಿನಯದ  ‘ಮಿಷನ್ ಮಂಗಲ್’  ಚಿತ್ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ತೆರೆ ಕಂಡಿದ್ದು,  ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದೆ.

‘ಮಿಷನ್ ಮಂಗಲ್’ ಚಿತ್ರ ತೆರೆಕಂಡ ಮೊದಲ ದಿನವೇ 29.16 ಕೋಟಿ ಗಳಿಸಿದೆ. ಮೊದಲ ದಿನದ ಗಳಿಕೆಯೊಂದಿಗೆ, ಈ ಚಿತ್ರವು ಅಕ್ಷಯ್ ಕುಮಾರ್ ಅವರ ಹಿಂದಿನ ಎಲ್ಲಾ ಚಿತ್ರಗಳ ದಾಖಲೆಗಳನ್ನು ಮುರಿದು ದೊಡ್ಡ ಆರಂಭ ಕಂಡಿದೆ.

ವಾಣಿಜ್ಯ ವಿಶ್ಲೇಷಕ ತರಣ್ ಆದರ್ಶ್ ಅವರು ಟ್ವೀಟ್ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ.   “ಮಿಷನ್ ಮಂಗಲ್ ಸ್ವಾತಂತ್ರ್ಯ ದಿನಾಚರಣೆಯಂದು ಅಬ್ಬರದ ಆರಂಭ ಕಂಡಿದೆ.   ರಜಾ ದಿನವಾಗಿರುವುದರಿಂದ ಚಿತ್ರಕ್ಕೆ ಹೆಚಚಿನ ಪ್ರೋತ್ಸಾಹ ಲಭಿಸಿದೆ.  ಇದು ಅಕ್ಷಯ್ ಕುಮಾರ್ ಅವರ ಅತಿದೊಡ್ಡ ಆರಂಭಿಕ ಚಿತ್ರವಾಗಿದೆ. ಗುರುವಾರ ಈ ಚಿತ್ರವು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 29.16 ಕೋಟಿ ಗಳಿಸಿದೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಅಕ್ಷಯ್ ಕುಮಾರ್ ಅವರ ಈ ಚಿತ್ರವು ವಾರಾಂತ್ಯದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಲಾಭ ಪಡೆಯಲಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ಮತ್ತೆ ಚಿತ್ರದ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದೆನ್ನುವ ನಿರೀಕ್ಷೆಯಿದೆ.  ‘ಮಿಷನ್ ಮಂಗಲ್’ 2013-14ನೇ ಸಾಲಿನ ಭಾರತದ ಮಂಗಳ ಯಾನದ ಕುರಿತ ಕಥೆಯನ್ನು ಆಧರಿಸಿದೆ. ಈ ಚಿತ್ರದಲ್ಲಿ ವಿಜ್ಞಾನಿಗಳಾದ ರಾಕೇಶ್ ಧವನ್ ಪಾತ್ರಕ್ಕೆ ನಟ ಅಕ್ಷಯ್ ಕುಮಾರ್  ಮತ್ತು ತಾರಾ ಶಿಂಧೆ ಪಾತ್ರಕ್ಕೆ ನಟಿ ವಿದ್ಯಾ ಬಾಲನ್  ಜೀವ ತುಂಬಿದ್ದಾರೆ. (ಎಸ್.ಎಚ್)

Leave a Reply

comments

Related Articles

error: