ಕ್ರೀಡೆಪ್ರಮುಖ ಸುದ್ದಿ

ಮಾಜಿ ಸ್ಪೋಟಕ ಕ್ರಿಕೆಟಿಗ ವಿ.ಬಿ.ಚಂದ್ರಶೇಖರ್ ಹೃದಯಾಘಾತದಿಂದ ನಿಧನರಾಗಿಲ್ಲ : ಸಾಲದ ಒತ್ತಡದಿಂದ ಆತ್ಮಹತ್ಯೆ  ಪೊಲೀಸ್ ಮಾಹಿತಿ

ದೇಶ(ನವದೆಹಲಿ)ಆ.16:- ಭಾರತದ ಮಾಜಿ ಸ್ಪೋಟಕ ಕ್ರಿಕೆಟಿಗ ವಿ.ಬಿ.ಚಂದ್ರಶೇಖರ್ ಹೃದಯಾಘಾತದಿಂದ ನಿಧನರಾಗಿಲ್ಲ. ಸಾಲದ ಒತ್ತಡದಿಂದಾಗಿ ವಿ.ಬಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಗುರುವಾರ ಆರಂಭಿಕ ವರದಿಯಲ್ಲಿ ಅವರು ಹೃದಯಾಘಾತದಿಂದ ಮೃತಪಟ್ಟರು ಎಂದು ಹೇಳಲಾಗಿತ್ತು. ಆದರೆ ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಸಾಲದ ಕಾರಣ ಚಂದ್ರಶೇಖರ್ ಗುರುವಾರ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸಾಲದಿಂದಾಗಿ ಅವರು ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದು, ಚಂದ್ರಶೇಖರ್ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ‘ವಿ.ಬಿ.ಕಾಂಚಿ ವೀರನ್ಸ್’ ಎಂಬ ತಂಡವನ್ನು ಹೊಂದಿದ್ದರು. ಅವರ ನಾಲ್ಕನೇ ಸರಣಿ ಗುರುವಾರ ಕೊನೆಗೊಂಡಿದೆ.

ಆರು ದಿನಗಳ ನಂತರ ಅವರು 58 ನೇ ಹುಟ್ಟುಹಬ್ಬವನ್ನು ಆಚರಿಸಬೇಕಿತ್ತು. ಮೃತರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅವರ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದೆ.  ವಿ.ಬಿ.ಚಂದ್ರಶೇಖರ್ ನಿಧನರಾಗಿರುವುದು ನೋವುಂಟು ಮಾಡಿದೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇವೆ ಎಂದಿದೆ.

ಮಾಜಿ ಕ್ರಿಕೆಟಿಗರಾದ ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ ಸೇರಿದಂತೆ ಹಲವರು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. (ಎಸ್.ಎಚ್)

Leave a Reply

comments

Related Articles

error: