ಮೈಸೂರು

ಗಾಂಜಾ ಮಾರಾಟ: ಓರ್ವ ಯುವತಿ ಹಾಗೂ ಯುವಕನ ಬಂಧನ ಇಬ್ಬರು ಪರಾರಿ

ಮೈಸೂರಿನ ಮಂಡಿಮೊಹಲ್ಲಾದ ಸುನ್ನಿ ಸ್ಕ್ವೇರ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಯುವತಿ ಹಾಗೂ ಯುವಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕೆ.ಟಿ. ಸ್ಟ್ರೀಟ್ ನ ಯಾಸಿನ್ ತಾಜ್ ಮತ್ತು ಸಯ್ಯದ್  ಎಂದು ಗುರುತಿಸಲಾಗಿದೆ.

ಶುಕ್ರವಾರ ಸಂಜೆಯ ವೇಳೆ  750ಗ್ರಾಂ ಗಾಂಜಾವನ್ನು ತಮ್ಮ ಗುಂಪಿನವರೊಂದಿಗೆ ಸೇರಿ  ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಇವರಿಬ್ಬರನ್ನು ಬಂಧಿಸಿದ್ದು,ಇವರ ಜೊತೆ ಇದ್ದ  ನಯಾಜ್ ಪಾಷಾ ಮತ್ತು ಶಾಹಿದ್ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಯಾಸಿನ್ ಮತ್ತು ಸಯ್ಯದ್ ರನ್ನು ಹೆಚ್ಚಿನ ವಿಚಾರಣೆಗಾಗಿ ಮಂಡಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಹುಣಸೂರು, ಹಾಸನ ಮತ್ತು ಪಿರಿಯಾಪಟ್ಟಣಗಳಿಂದ ಗಾಂಜಾವನ್ನು ತರಿಸಿ ಮೈಸೂರಿನ ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಹಣಕ್ಕಾಗಿ ಮಾರುತ್ತಿದ್ದರು. ಈ ಡ್ರಗ್ ಮಾರಾಟದ ಹಿಂದೆ ಬೃಹತ್ ಜಾಲವೇ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಪೂರ್ಣ ವಿವರ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಸಿಟಿಟುಡೆ ಮಾತನಾಡಿಸಿದಾಗ ಯಾಸಿನ್ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದಳು. ಒಳ್ಳೆಯ ಲಾಭ ಬರುತ್ತದೆಯೆನ್ನುವ ಉದ್ದೇಶದಿಂದ ಗುಂಪು ಗಾಂಜಾ ಮಾರಾಟದಲ್ಲಿ ತೊಡಗಿಸಿಕೊಂಡಿತ್ತು. ಪರಾರಿಯಾದ ಇಬ್ಬರಿಗೆ ಇವರಿಂದ ಯಾವ ವಿದ್ಯಾರ್ಥಿಗಳು ಗಾಂಜಾ ಕೊಳ್ಳುತ್ತಿದ್ದರು ಎನ್ನುವುದು ತಿಳಿದಿತ್ತು ಎಂದರು. ಗಾಂಜಾ ಮಾಫಿಯಾದಿಂದ ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳು ಚಿಂತಿಸುವಂತಾಗಿದೆ ಎಂದಿದ್ದಾರೆ.

ಪೊಲೀಸರು ನಯಾಜ್ ಮತ್ತು ಶಾಹಿದ್ ನ ಬೇಟೆಯಲ್ಲಿದ್ದಾರೆ. ಅವರನ್ನು ಬಂಧಿಸಿ ಎಲ್ಲ ಮಾಹಿತಿಗಳನ್ನು ಕಲೆಹಾಕಲಾಗುತ್ತದೆ. ಯಾಸಿನ್ ಮತ್ತು ಸಯ್ಯದ್ ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಿಸಿಬಿ ಇನ್ಸ್ ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆದಿತ್ತು.

Leave a Reply

comments

Tags

Related Articles

error: