ಮೈಸೂರು

ಶ್ರೀ ಸೀತಾಕಲ್ಯಾಣಮಂಟಪ ದೇವಾಂಬದಲ್ಲಿ 15ನೇ ವರ್ಷದ ದೀಪದ ಪೂಜೆಯ ಮಹೋತ್ಸವ

ಮೈಸೂರು,ಆ.17:-  ಮೈಸೂರಿನ ಶ್ರೀ ಸೀತಾಕಲ್ಯಾಣಮಂಟಪ ದೇವಾಂಬ ಅಗ್ರಹಾರ ದಲ್ಲಿ ಗಾಣಿಗ ಸಂಘ, ಮೈಸೂರು ( ನೋ ) ಗಾಣಿಗ ಮಹಿಳಾ ಘಟಕದ ವತಿಯಿಂದ 15ನೇ ವರ್ಷದ ದೀಪದ ಪೂಜೆಯ ಮಹೋತ್ಸವವನ್ನು ನಡೆಯಿತು.

ಈ ಪೂಜೆಯಲ್ಲಿ ಗಾಣಿಗ ಸಮುದಾಯದ ಮಹಿಳೆಯರು ಏಕಕಾಲದಲ್ಲಿ ದೇವಿಯ ಪೂಜೆ ಮಾಡಿದರು. ಈ ಸಂದರ್ಭದಲ್ಲಿ  ರಾಜ್ಯದಲ್ಲಿ ಆಗಿರುವ ಭೀಕರ  ಪ್ರವಾಹ ನಿಲ್ಲಲಿ ಎಂದು  ದೇವಿಯಲ್ಲಿ ಎಲ್ಲಾ ಸುಂಮಗಲಿಯರು ಬೇಡಿಕೊಂಡು ಮುಂದೆಂದೂ ದೇಶದಲ್ಲಿ ಇಂತಹ ಜಲ ಪ್ರವಾಹ ಆಗದಿರಲಿ, ಈ ಪ್ರವಾಹದಲ್ಲಿ ಸಾವಿಗೀಡಾದ ಕುಟುಂಬಕ್ಕೆ ಆ ನೋವನ್ನು ತಡೆಯುವ ಶಕ್ತಿ ನೀಡಲಿ, ಆದಷ್ಟು ಬೇಗ ರೈತರು ತಾವು ಬೆಳೆದ ಬೆಳೆ ನಾಶವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಅವರ ನೆರವಿಗೆ ನಿಲ್ಲಲಿ ಎಂದು ಬೇಡಿಕೊಂಡರು.

ಈ ಕಾರ್ಯಕ್ರಮವನ್ನು    ಧನಲಕ್ಷ್ಮೀ ಹಾಗೂ  ತಿರುಮಲೈ ಅವರ ಉಪಸ್ಥಿತಿಯಲ್ಲಿ ನೆರವೇರಿಸಿದರು. ಈ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರು ಹಾಗೂ ಸುಮಂಗಲಿಯರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಗಾಣಿಗ ಮುಖಂಡರಾದ ಹಾಗೂ ವಕೀಲರಾದ ತ್ಯಾಗರಾಜ್ , ಮಹಿಳಾ ಘಟಕದ ಅಧ್ಯಕ್ಷರಾದ  ಮಂಜುಳ, ಕಾರ್ಯದರ್ಶಿ ಕಲಾವತಿ,  ಸೆಲ್ವರಾಜ, ಸಿ ಪಿ ವೆಂಕಟೇಶ್, ಟಿವಿ ಮಣಿ, ಕೋಮಲ, ವಿಜಯಲಕ್ಷ್ಮಿ, ಕಲ್ಪನಾ, ಉಮಾ, ಪ್ರಿಯ, ಅಭಿಷೇಕ್,  ಬಸವಣ್ಣ ಇತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: