ಪ್ರಮುಖ ಸುದ್ದಿಮೈಸೂರು

ದಿ.24ರಂದು ಜ್ಞಾನೋದಯ ಕಾಲೇಜಿನಿಂದ ಅಂತರಶಾಲಾ ವಿಜ್ಞಾನ ಮೇಳ -2019

ಮೈಸೂರು,ಆ.17 : ಶ್ರೀ ಶೃಂಗೇರಿ ಶಾರದ ಪೀಠದ ಅಂಗಸಂಸ್ಥೆಯಾಗಿರುವ ಜ್ಞಾನೋದಯ ಪದವಿ ಪೂರ್ವ ಕಾಲೇಜಿನಿಂದ ಪ್ರತಿ ವರ್ಷದಂತೆ ಈ ವರ್ಷವು ಸಹ ಅಂತರಶಾಲಾ ವಿಜ್ಞಾನ ಮೇಳ – 2019 ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲರಾದ ಟಿ.ಎಸ್.ಶ್ರೀಕಂಠಶರ್ಮ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಿ 24ರ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದ್ದು, ಜ್ಞಾನೋದಯ ಪದವಿ ಪೂರ್ವ ಕಾಲೇಜು ಕೇವಲ ವಿಜ್ಞಾನ ಸಂಯೋಜನೆಗಳ ವಿಭಾಗವುಳ್ಳ ಕಾಲೇಜಾಗಿದ್ದು ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚಿನ ಒಲವು , ಆಸಕ್ತಿ ಹಾಗು ವೈಜ್ಞಾನಿಕ ಚಿಂತನೆಯನ್ನು ಮೂಡಿಸುವ ಸಲುವಾಗಿ ಮೈಸೂರಿನ RiT ಸಂಸ್ಥೆಯ ಸಹಯೋಗದೊಂದಿಗೆ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಈ ವಿಜ್ಞಾನ ಮೇಳವನ್ನು ಏರ್ಪಡಿಸಲಾಗಿದೆ.

ಚಂದ್ರಯಾನ – 1ರಲ್ಲಿ ಮಹತ್ತರವಾದ ಪಾತ್ರವಹಿಸಿದ್ದ ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳು ಮತ್ತು ಇಸೋ ( ISRO ) ದ ಮಾಜಿ ಅಧ್ಯಕ್ಷರಾದ  ಎ . ಎಸ್ . ಕಿರಣ್ ಕುಮಾರ್ ರವರು ಮುಖ್ಯ ಅತಿಥಿಗಳಾಗಿರುತ್ತಾರೆ. ನಂತರ ಇವರೊಂದಿಗೆ . ಸಂವಾದ ಇದ್ದು, ವಿದ್ಯಾರ್ಥಿಗಳು ಹಾಗೂ ವಿಜ್ಞಾನ ಶಿಕ್ಷಕರು ಭಾಗಿಯಾಗಬಹುದೆಂದರು.

ಮಧ್ಯಾಹ್ನ 3 . 30ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಇರುತ್ತದೆ, ಬಹುಮಾನ ವಿಜೇತರಿಗೆ ನಗದು ಬಹುಮಾನಗಳ ಜೊತೆಗೆ ಪಾರಿತೋಷಕಗಳನ್ನು ನೀಡಲಾಗುವುದು, ಅಲ್ಲದೇ ವಿಜ್ಞಾನ ಮೇಳದಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ವಿಜ್ಞಾನ ಕೈಪಿಡಿಯನ್ನು ಉಚಿತವಾಗಿ ವಿತರಿಸಲಾಗುವುದು . .

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9986803125 – ಶ್ರೀ ಟಿ . ಎಸ್ . ಶ್ರೀಕಂಠಶರ್ಮ , ಪ್ರಾಚಾರ್ಯರು 9902064362 – ಶ್ರೀಮತಿ ಪದ್ಮರವಿ , ಉಪ ಪ್ರಾಚಾರ್ಯರು 0821 – 2541111 , 2541110,  Email ID : jnanodayappugollege @ gmail.com . ಸಂಪರ್ಕಿಸಬಹುದೆಂದು ತಿಳಿಸಿದರು.

ಉಪನ್ಯಾಸಕಿ ಪದ್ಮಾ ರವಿ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: