ಲೈಫ್ & ಸ್ಟೈಲ್

ಹೆಚ್ಚುತ್ತಿರುವ ಪುರುಷರಲ್ಲಿನ ಬಂಜೆತನಕ್ಕಿದೆ ಪರಿಹಾರ

ಮದುವೆಯಾದ ಮೂರ್ನಾಲ್ಕು ವರ್ಷಗಳ ಒಳಗೆ ಹೆಣ್ಣು ತಾಯಿಯಾಗದಿದ್ದರೆ ಆಕೆಯನ್ನು ಬಂಜೆಯೆಂದು ಕರೆಯಲಾಗುತ್ತಿತ್ತು. ಅಷ್ಟೇ ಅಲ್ಲ ಆಕೆಯ ಜಾಗಕ್ಕೆ ಬೇರೊಬ್ಬಳನ್ನು ತರಲಾಗುತ್ತಿತ್ತು. ಆಕೆಯೂ ತಾಯಿಯಾಗದಿದ್ದಲ್ಲಿ ಅವಳಲ್ಲಿಯೂ ದೋಷ ಹುಡುಕಲಾಗುತ್ತಿತ್ತು. ಆದರೀಗ ಕಾಲ ಬದಲಾಗಿದೆ. ತಾಯಿಯಾಗಲು ಸ್ತ್ರೀ ಎಷ್ಟು ಕಾರಣಳೋ, ಪುರುಷನೂ ಅಷ್ಟೇ ಕಾರಣ ಎನ್ನುವ ವಿಚಾರ ವಿಜ್ಞಾನ ಬೆಳೆದಂತೆ ಜನರಿಗೆ ತಿಳಿಯುತ್ತಿದೆ. ಇತ್ತೀಚಿನ ಆತಂಕಕಾರಿ ಬೆಳವಣಿಗೆಯೇನೆಂದರೆ ಪುರುಷರನ್ನು ಕಾಡುತ್ತಿರುವ ಬಂಜೆತನ. ಅವರಲ್ಲಿನ ಬಂಜೆತನ ನಿವಾರಣೆಯಾಗಿ ಫಲವಂತರಾಗಲು ಏನು ಮಾಡಬೇಕು ಎನ್ನುವ ಯೋಚನೆ ಕಾಡುವುದು ಸಹಜ. ಪ್ರತಿದಿನವೂ ತಪ್ಪದೇ ನಿಮ್ಮ ಆಹಾರದಲ್ಲಿ ಇವುಗಳನ್ನು ಅಳವಡಿಸಿಕೊಂಡಾಗ ನೀವು ಕೂಡ ಮುದ್ದಾದ ಮಗುವಿನ ತಂದೆಯಾಗಬಹುದು.

ಬೆಳ್ಳುಳ್ಳಿ : ಪ್ರತಿದಿನ ಬೆಳಿಗ್ಗೆ ಮೂರರಿಂದ ನಾಲ್ಕು ಎಸಳು ಬೆಳ್ಳುಳ್ಳಿಯನ್ನು ಹುರಿದು ತಿನ್ನಿ. ಇದರಲ್ಲಿರುವ ಎಲಿಸಿನ್ ಅಂಶವು ರಕ್ತ ಸಂಚಾರವನ್ನು ಸರಾಗವಾಗಿಸುತ್ತದೆ.

ಆಕ್ರೋಟ್ : ಪ್ರತಿದಿನ ಒಂದು ಮುಷ್ಠಿ ಆಕ್ರೋಟ್ ತಿನ್ನಿ. ಇದರಲ್ಲಿರುವ ಓಮೆಗಾ 3 ಆ್ಯಸಿಡ್ಸ್ ರಕ್ತಸಂಚಾರವನ್ನು ಸರಾಗವಾಗಿರಿಸುವುದರಲ್ಲಿ ಸಹಾಯ ಮಾಡಲಿದೆ.

ಟೊಮ್ಯಾಟೊ : ಟೊಮ್ಯಾಟೊವನ್ನು ಆಲಿವ್ ಆಯಿಲ್ ನಲ್ಲಿ ಬೇಯಿಸಿ ಸೇವಿಸಿ. ಇದರಲ್ಲಿರುವ ಲಾಯಿಕೋಪಿನ್ ಅಂಶವು ಪುರುಷರಲ್ಲಿನ ವೀರ್ಯಾಣು ಸಂಖ್ಯೆಯನ್ನು ಹೆಚ್ಚಿಸುತ್ತದೆ.

ಸಿಹಿಗುಂಬಳ ಬೀಜ : ಪ್ರತಿದಿನ ಒಂದು ಮುಷ್ಠಿ ಸಿಹಿಗುಂಬಳ ಬೀಜವನ್ನು ತಿನ್ನಬೇಕು. ಇದರಲ್ಲಿರುವ ಜಿಂಕ್ ಮತ್ತು ಓಮೆಗಾ 3 ಯಿಂದ ಟೆಸ್ಟೊಸ್ಟೆರೋನ್ ಮತ್ತು ವೀರ್ಯಾಣುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ.

ಬ್ಲ್ಯಾಕ್ ಚಾಕಲೇಟ್ : ಡಾರ್ಕ್ ಚಾಕಲೇಟ್ ಸೇವಿಸಿ. ಇದರಲ್ಲಿರುವ ಎಲ್ ಅರ್ಜಿನೈನ್ ಹೆಸರಿನ ಎಮಿನೋ ಆ್ಯಸಿಡ್ ವೀರ್ಯಾಣುಗಳ ಗಾತ್ರ ಮತ್ತು ಗುಣಮಟ್ಟವನ್ನು ಹೆಚ್ಚಿಸಲಿದೆ.

ಮೊಟ್ಟೆ : ಪ್ರತಿದಿನ ಬೆಳಗಿನ ಉಪಹಾರದಲ್ಲಿ ಎರಡು ಮೊಟ್ಟೆಗಳನ್ನು ಸೇವಿಸಿ. ಇದರಲ್ಲಿರುವ ಪ್ರೋಟೀನ್ ಮತ್ತು ವಿಟಾಮಿನ್ ಇ ಆರೋಗ್ಯಯುತ ವೀರ್ಯಾಣುಗಳನ್ನು ಸೃಷ್ಟಿಸಲಿದೆ.

ಬಾಳೆಹಣ್ಣು : ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಒಂದು ಬಾಳೆಹಣ್ಣು ತಿನ್ನಿ. ಇದರಲ್ಲಿರುವ ಬ್ರೊಮಿಲೆನ್ ಹೆಸರಿನ ಎಂಜೈಮ್ ಮತ್ತು ವಿಟಾಮಿನ್ ಬಿ ಶಕ್ತಿಯನ್ನು ನೀಡುವುದಲ್ಲದೇ ವೀರ್ಯಾಣು ಸಂಖ್ಯೆ ಹೆಚ್ಚಿಸಲಿದೆ.

ದಾಳಿಂಬೆ ಜ್ಯೂಸ್ : ಪ್ರತಿದಿನ ಒಂದು ಗ್ಲಾಸ್ ದಾಳಿಂಬೆ ಜ್ಯೂಸ್ ಕುಡಿಯಿರಿ. ಇದರಿಂದ ವೀರ್ಯಾಣು ಸಂಖ್ಯೆಯಲ್ಲಿ ಹೆಚ್ಚಳವಾಗುವ ಜೊತೆ ಗುಣಮಟ್ಟವೂ ಹೆಚ್ಚಲಿದೆ.

ಕ್ಯಾರೆಟ್ ಜ್ಯೂಸ್ : ಪ್ರತಿದಿನ ಸಲಾಡ್ ನಲ್ಲಿ ಕ್ಯಾರೆಟ್ ಇರುವಂತೆ ನೋಡಿಕೊಳ್ಳಿ ಅಥವಾ ಕ್ಯಾರೆಟ್ ಜ್ಯೂಸ್ ಕುಡಿಯಿರಿ ಇದರಲ್ಲಿರುವ ವಿಟಾಮಿನ್ ಎ ವೀರ್ಯಾಣು ಉತ್ಪತ್ತಿಯನ್ನು ಹೆಚ್ಚಿಸುತ್ತದೆ.

ಪಾಲಾಕ್ ಜ್ಯೂಸ್ : ಪ್ರತಿದಿನ ಆಹಾರದಲ್ಲಿ ಪಾಲಾಕ್ ಇರುವಂತೆ ನೋಡಿಕೊಳ್ಳಿ ಅಥವಾ ಪಾಲಾಕ್ ಜ್ಯೂಸ್ ಸೇವಿಸಿ. ಇದರಲ್ಲಿರುವ ಪಾಲಿಕ್ ಆ್ಯಸಿಡ್ ವಿರ್ಯಾಣು ಗುಣಮಟ್ಟ ಮತ್ತು ಆಕಾರ ಚೆನ್ನಾಗಿರಿಸಲು ಸಹಕರಿಸುತ್ತದೆ.

Leave a Reply

comments

Related Articles

error: