ಮೈಸೂರು

ಮೈಸೂರು ಮೃಗಾಲಯದ ಒಂದು ಜಿರಾಫೆ ದತ್ತು ಸ್ವೀಕರಿಸಿದ ಹೆಚ್.ಆರ್.ವೆಂಕಟೇಶ್

ಮೈಸೂರು,ಆ.17:- ಹೆಚ್.ಆರ್.ವೆಂಕಟೇಶ್ ಬೆಂಗಳೂರು ಅವರು 1,00,000ರೂ.ಪಾವತಿಸಿ ಮೈಸೂರು ಮೃಗಾಲಯದ ಒಂದು ಜಿರಾಫೆಯನ್ನು ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿದ್ದಾರೆ.

ಮೈಸೂರು ಮೃಗಾಲಯದ ಮುಖ್ಯ ಧ್ಯೇಯೋದ್ದೇಶವಾದ ಪ್ರಾಣಿ ಸಂರಕ್ಷಣೆಯಂತಹ ಒಂದು ಮಹತ್ಕಾರ್ಯದಲ್ಲಿ ತಮ್ಮ ಕೈಜೋಡಿಸುವ ಮೂಲಕ ಉನ್ನತಮಟ್ಟದ ಕೊಡುಗೆಯನ್ನು ನೀಡಿರುವ ಹೆಚ್.ಆರ್.ವೆಂಕಟೇಶ್ ಬೆಂಗಳೂರು ಅವರಿಗೆ ಶ್ರೀಚಾಮರಾಜೇಂದ್ರ ಮೃಗಾಲಯವು ವಂದಿಸಿದೆ.

ಪ್ರಾಣಿ ಸಂರಕ್ಷಣೆಯ ಸತ್ಕಾರ್ಯಕ್ಕೆ  ಅವರು ನೀಡಿರುವ ಮಹತ್ತರ ಬೆಂಬಲ ಇದಾಗಿದ್ದು, ಅವರ  ಈ ಕಾರ್ಯ ಇತರೆ ವ್ಯಕ್ತಿಗಳು ಮತ್ತು ಸಂಘಸಂಸ್ಥೆಗಳು ಸ್ವತಃ ಮುಂದೆ ಬಂದು ನಮ್ಮ ಪ್ರಾಣಿ ಸಂರಕ್ಷಣೆಯಂತಹ ಮಹತ್ಕಾರ್ಯದಲ್ಲಿ ಭಾಗಿಯಾಗಲು ಪ್ರೇರಕವಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: