ಪ್ರಮುಖ ಸುದ್ದಿ

ಸ್ಟೋನ್​ ಕ್ರಷರ್​​ಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ: ಕಚೇರಿಗಳಿಗೆ ಬೀಗ ಮುದ್ರೆ

ರಾಜ್ಯ(ಮಂಡ್ಯ)ಆ.19:- ನಿನ್ನೆ ಬೆಳ್ಳಂಬೆಳಗ್ಗೆ ಕ್ರಷರ್‌ಗಳ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ಕೆಆರ್​ಎಸ್ ಭದ್ರತೆಯ ದೃಷ್ಟಿಯಿಂದ 28 ಸ್ಟೋನ್ ಕ್ರಷರ್‌ಗಳಿಗೆ ಬೀಗ ಜಡಿದಿದ್ದಾರೆ.

ಜಿಲ್ಲಾಧಿಕಾರಿ ವೆಂಕಟೇಶ್ ಸೂಚನೆ ಮೇರೆಗೆ ದಾಳಿ ಮಾಡಿರುವ ಪಾಂಡವಪುರ ತಹಶೀಲ್ದಾರ್ ಪ್ರಮೋದ್ ಎಸ್. ಪಾಟೀಲ್, ಬೀಗ ಜಡಿದು ಮುಂದಿನ ಆದೇಶದವರೆಗೂ ತೆರೆಯದಂತೆ ಎಚ್ಚರಿಕೆ ನೀಡಿ ಬಂದಿದ್ದಾರೆ. ಮಾಜಿ ಸಚಿವ, ಶಾಸಕ ಸಿ.ಎಸ್.ಪುಟ್ಟರಾಜು ಒಡೆತನದ ಎಸ್‌ಟಿಜಿ ಸ್ಟೋನ್ ಕ್ರಷರ್ ಸೇರಿದಂತೆ ರಾಮಾಂಜನೇಯ ಸ್ಟೋನ್ ಕ್ರಷರ್, ಕೃಷ್ಣ ಸ್ಟೋನ್ ಕ್ರಷರ್, ಬಾಲಾಜಿ ಸ್ಟೋನ್ ಕ್ರಷರ್, ಎಸ್​ವಿಟಿ ಸ್ಟೋನ್ ಕ್ರಷರ್, ಎಸ್​ಟಿಸಿ ಸ್ಟೋನ್ ಕ್ರಷರ್, ಆರ್​ಎಎನ್ ಸ್ಟೋನ್‌ ಕ್ರಷರ್, ಜ್ಯೋತಿ ಸ್ಟೋನ್ ಕ್ರಷರ್, ಮಂಗಳಾ ಸ್ಟೋನ್ ಕ್ರಷರ್, ಸಿದ್ದರಾಮೇಶ್ವರ ಸ್ಟೋನ್ ಕ್ರಷರ್, ಸಿದ್ದಲಿಂಗೇಶ್ವರ ಸ್ಟೋನ್ ಕ್ರಷರ್ ಸೇರಿದಂತೆ 28 ಸ್ಟೋನ್ ಕ್ರಷರ್​ಗಳಿಗೆ ಬೀಗ ಜಡಿಯಲಾಗಿದೆ.

ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ ಕಾವಲ್ ಪ್ರದೇಶದ ಕಲ್ಲು ಗಣಿಗಾರಿಕೆ ಮೇಲೆ ದಿಢೀರ್ ದಾಳಿ ಮಾಡಿ ಬೀಗ ಮುದ್ರೆ ಹಾಕಲಾಗಿದೆ. ಕೆಆರ್​ಎಸ್ ಜಲಾಶಯ ಭರ್ತಿಯಾಗಿರುವ ಪರಿಣಾಮ ಯಾವುದೇ ಅಪಾಯ ಸಂಭವಿಸಿದಂತೆ ಮುಂಜಾಗ್ರತಾ ಕ್ರಮವಾಗಿ ಬೀಗ ಮುದ್ರೆ ಹಾಕಲಾಗಿದ್ದು, ಮುಂದಿನ ಆದೇಶ ಬರುವವರೆಗೂ ಗಣಿಗಾರಿಕೆಗಳಿಗೆ ಬೀಗ ಮುದ್ರೆ ಹಾಕುವುದಾಗಿ ತಹಶೀಲ್ದಾರ್ ಪ್ರಮೋದ್ ಎಲ್. ಪಾಟೀಲ್ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: