ಮೈಸೂರು

ವಾಷಿಂಗ್ ಮಶಿನ್ ಬಳಸುವ ಗೃಹಿಣಿಯರೇ ಎಚ್ಚರ : ವಾಷಿಂಗ್ ಮಶಿನ್ ನಲ್ಲಿತ್ತು ನಾಗರಹಾವು!

ಮೈಸೂರು,ಆ.19:- ವಾಷಿಂಗ್ ಮಶಿನ್ ಬಳಸುವ ಗೃಹಿಣಿಯರು  ಎಚ್ಚರವಾಗಿರಬೇಕು . ಯಾಕೆಂದರೆ ವಾಷಿಂಗ್ ಮಶಿನ್ ನಲ್ಲಿ  ಹಾವು ಸೇರಿಕೊಂಡಿದ್ದ ಅಪರೂಪದ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಶ್ರೀ ಶಿವರಾತ್ರೀಶ್ವರ ನಗರದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ನಿವಾಸಿ ಸ್ಟಾಲಿನ್ ಕೆ.ಪೌಲ್ ಅವರ ಮನೆಯ ವಾಷಿಂಗ್ ಮಶಿನ್ ಒಳಗೆ ನಾಗರ ಹಾವು ಸೇರಿಕೊಂಡಿತ್ತು. ಈ ನಡುವೆ ಸ್ಟಾಲಿನ್ ಕೆ.ಪೌಲ್ ಅವರ ಹೆಂಡತಿ,  ಪತಿಯ ಬಟ್ಟೆ ಒಗೆಯಲು ಹಾಕಿ ಮಗುವಿನ ಬಟ್ಟೆ ಹಾಕಲು ಹೋದಾಗ ನಾಗರಹಾವು ಕಾಣಿಸಿಕೊಂಡಿದೆ.

ತಕ್ಷಣ  ಹೆಂಡತಿ ತನ್ನ ಗಂಡನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಈ ವಿಷಯವನ್ನು ಉರಗ ತಜ್ಞ ಸ್ನೇಕ್ ಶ್ಯಾಂ ಅವರಿಗೆ ಮುಟ್ಟಿಸಲಾಗಿತ್ತು. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಸ್ನೇಕ್ ಶ್ಯಾಂ ಅವರು  ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: