ಪ್ರಮುಖ ಸುದ್ದಿ

ಫೋನ್ ಕದ್ದಾಲಿಕೆಯನ್ನು ಸಿಬಿಐಗೆ ವಹಿಸಿದ ಹಿನ್ನೆಲೆ ಸಿಎಂ ಬಿಎಸ್ ವೈ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ : ಟ್ವೀಟರ್ ನಲ್ಲಿ ಜಾಡಿಸಿದ ವಿಜಯೇಂದ್ರ

ರಾಜ್ಯ(ಬೆಂಗಳೂರು)ಆ.19:- ಸಿಎಂ‌ ಯಡಿಯೂರಪ್ಪನವರು ಫೋನ್ ಕದ್ದಾಲಿಕೆಯನ್ನು ಸಿಬಿಐಗೆ ವಹಿಸಿದ ಹಿನ್ನೆಲೆಯಲ್ಲಿ  ಬಿಎಸ್ ವೈ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದರು. ಇದೀಗ ಮಾಜಿ ಸಿಎಂ ಕುಮಾರಸ್ವಾಮಿಯವರನ್ನು ಟ್ವೀಟರ್ ನಲ್ಲಿ   ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಜಾಡಿಸಿದ್ದಾರೆ.

ಈ ಕುರಿತು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿರುವ ಅವರು ‘ಕಮಿಷನ್‌ ದಂಧೆ,ವರ್ಗಾವಣೆ ದಂಧೆ,ನೇಮಕಾತಿ ದಂಧೆಗಳ ಜನಕರು ನೀವು. ಇವುಗಳ ಗುತ್ತಿಗೆದಾರರು ನೀವೇ ಎಂಬುದು ಇಡೀ ರಾಜ್ಯಕ್ಕೆ ತಿಳಿದಿದೆ ಕುಮಾರಸ್ವಾಮಿಯವರೇ. ಕೋತಿ ತಾನು ತಿಂದು ಮೇಕೆ ಬಾಯಿಗೆ ವರೆಸಿದಂತಿದೆ ನಿಮ್ಮ ಮಾತುಗಳು. ಸಿಬಿಐ ತನಿಖೆಗೆ ಹೆದರಿ ಹತಾಶರಾಗಿ ಹೇಳಿಕೆ‌ ನೀಡುತ್ತಿದ್ದೀರಾ. ವಿಷಯಾಂತರಗೊಳಿಸಿ ಜನತೆಯ ದಿಕ್ಕು ತಪ್ಪಿಸುವ ಕುತಂತ್ರದ ಮಾತು ನಿಲ್ಲಿಸಿ ಎಂದು ನಯವಾಗಿಯೇ ಮಾಜಿ ಸಿಎಂ‌ ಕುಮಾರಸ್ವಾಮಿಯವರನ್ನು ಟ್ವೀಟರ್ ನಲ್ಲಿ ಜಾಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: