ಕರ್ನಾಟಕಪ್ರಮುಖ ಸುದ್ದಿ

ಮತ್ತೆ ಸಚಿವ ಸಂಪುಟ ಸೇರಲಿರುವ ಜಾರ್ಜ್: ಸೆ.26ರಂದು ಪ್ರಮಾಣ ವಚನ

ಕೆ.ಜೆ. ಜಾರ್ಜ್ ಅವರನ್ನು ಸಂಪುಟದಲ್ಲಿ ಮರು ಸೇರ್ಪಡೆಗೊಳಿಸುವಂತೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆಯಲ್ಲಿ ಅವರು ಸೆ.26ರಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ರಾಜೀನಾಮೆ ನೀಡಿದ್ದ ಕೆ.ಜೆ. ಜಾರ್ಜ್ ಗೆ ಸಿಐಡಿ ಕ್ಲೀನ್ ಚಿಟ್ ನೀಡಿತ್ತು.

ಜಾರ್ಜ್ ಗೃಹಸಚಿವರಾಗಿದ್ದ ಸಂದರ್ಭ ನನಗೆ ಕಿರುಕುಳ ನೀಡಿದ್ದರು ಎಂದು ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೂ ಮುನ್ನ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಾರ್ಜ್ ರಾಜೀನಾಮೆಗೆ ರಾಜ್ಯಾದ್ಯಂತ ಒತ್ತಡ ಸೃಷ್ಟಿಯಾದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದರು.   

ಮೊದಲು ಗೃಹ ಸಚಿವರಾಗಿದ್ದ ಜಾರ್ಜ್ ಬಳಿಕ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನಿರ್ವಹಿಸಿದ್ದರು.

Leave a Reply

comments

Tags

Related Articles

error: