
ಮೈಸೂರು
ವಿಮಾನ ನಿಲ್ದಾಣಕ್ಕೆ 29 ಕುಟುಂಬಗಳ ಮನೆ ಮತ್ತು ನಿವೇಶನ ಭೂಸ್ವಾಧೀನ : ಪರಿಹಾರ ನೀಡದ ಜಿಲ್ಲಾಡಳಿತ; ಮನೆ ಕುಸಿತ
ಮೈಸೂರು,ಆ.19:- ಮೈಸೂರಿನ ಮಂಡಕಳ್ಳಿಯಲ್ಲಿ ಸುಮಾರು 13 ವರ್ಷಗಳ ಹಿಂದೆ ವಿಮಾನ ನಿಲ್ದಾಣಕ್ಕೆ 29 ಕುಟುಂಬಗಳ ಮನೆ ಮತ್ತು ನಿವೇಶನಗಳನ್ನು ಭೂಸ್ವಾಧೀನ ಮಾಡಿದ್ದು ಇಲ್ಲಿಯವರೆಗೂ ಅಲ್ಲಿನ ಫಲಾನುಭವಿಗಳಿಗೆ ಪರಿಹಾರವನ್ನು ಕೊಡದೆ ಕಾಯಿಸುತ್ತಿದ್ದಾರೆ.
ರಾತ್ರಿ ಸುರಿದ ಮಳೆಗೆ ಮನೆಯು ಕುಸಿದಿದೆ. ಹೀಗೆ ಮಳೆ ಮುಂದುವರೆದರೆ ಹಲವಾರು ಮನೆಗಳು ಕುಸಿಯುವ ಹಂತದಲ್ಲಿವೆ. ಹಲವಾರು ಬಾರಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನೆಯಾಗಿಲ್ಲ. ಇದಕ್ಕೆಲ್ಲ ನೇರ ಹೊಣೆ ಜಿಲ್ಲಾಡಳಿತವೇ ಹೊರತು ಬೇರೆ ಯಾರೂ ಅಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. (ಕೆ.ಎಸ್,ಎಸ್.ಎಚ್)