ಮೈಸೂರು

‘ಡಾ.ರಾಧಾಕೃಷ್ಣನ್ ಶಿಕ್ಷಣ ರತ್ನ ಪ್ರಶಸ್ತಿ’ಗೆ ಡಾ.ಶ್ರೀಧರ್ ಹೆಚ್ ಭಾಜನ

ಮೈಸೂರು,ಆ.19:- ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ(ರಿ)ಬೆಂಗಳೂರು ಇವರು ಉನ್ನತ ಶಿಕ್ಷಣ ಹಾಗೂ ಸಂಶೀಧನಾ ಕ್ಷೇತ್ರದಲ್ಲಿ ಸಲ್ಲಿಸಿರುವ ಅಮೂಲ್ಯ ಸೇವೆಯನ್ನು ಪರಿಗಣಿಸಿ ನೀಡುವ 2019ನೇ ಸಾಲಿನ ಪ್ರತಿಷ್ಠಿತ ‘ಡಾ.ರಾಧಾಕೃಷ್ಣನ್ ಶಿಕ್ಷಣ ರತ್ನ ಪ್ರಶಸ್ತಿ’ಗೆ ಮೈಸೂರಿನ ಎಸ್.ಬಿ.ಆರ್.ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀಧರ್ ಹೆಚ್.ಅವರು ಭಾಜನರಾಗಿರುತ್ತಾರೆ.

ಆಗಸ್ಟ್ 25ರಂದು ಬೆಂಗಳೂರಿನ ಕನ್ನಡ ಭವನದಲ್ಲಿ ನಡೆಯುವ ಅಭಿನಂದನಾ ಕಾರ್ಯಕ್ರಮದಲ್ಲಿ ಡಾ.ಶ್ರೀಧರ್ ಹೆಚ್.ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ವೆಂಕಟರಾಮು ತಿಳಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: