ಪ್ರಮುಖ ಸುದ್ದಿ

ಸೆ.29 ರಿಂದ ಅ.4 ರವರೆಗೆ ಮಡಿಕೇರಿಯಲ್ಲಿ ಸೇನಾ ನೇಮಕಾತಿ ರ್ಯಾಲಿ

ರಾಜ್ಯ(ಮಡಿಕೇರಿ) ಆ.20 :- ಬೆಂಗಳೂರು ವಲಯ ಸೇನಾ ನೇಮಕಾತಿ ಕಚೇರಿ ವತಿಯಿಂದ ಸೆ.29 ರಿಂದ ಅ.4 ರವರೆಗೆ ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಪಾಯಿ ಸಾಮಾನ್ಯ ಕರ್ತವ್ಯ, ಸಿಪಾಯಿ ತಾಂತ್ರಿಕ, ಸೈನಿಕ ಟ್ರೇಡ್ಸ್ ಮೆನ್(ಹತ್ತನೆ ತರಗತಿ), ಸೈನಿಕ ಟ್ರೇಡ್ಸ್‍ಮೆನ್(8ನೇ ತರಗತಿ), ಸೈನಿಕ ಲಿಪಿಕ/ ಉಗ್ರಾಣ ಪಾಲಕ ತಾಂತ್ರಿಕ, ಸೈನಿಕ ತಾಂತ್ರಿಕ ನರ್ಸಿಂಗ್ ಅಸಿಸ್ಟಂಟ್/ ನರ್ಸಿಂಗ್ ಅಸಿಸ್ಟಂಟ್ ವೆಟೆರಿನರಿ, ಸೈನಿಕ ಸಿಫಾಯಿ ಫಾರ್ಮಾ ಹುದ್ದೆಗಳಿಗೆ ಸೇನಾ ನೇಮಕಾತಿ ರ್ಯಾಲಿ ನಡೆಯಲಿದೆ.
ಈ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ಇಚ್ಛಿಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು www.joinindianarmy.nic.in ನ ಮುಖಾಂತರ ಆನ್‍ಲೈನ್‍ನಲ್ಲಿ ಸೆಪ್ಟೆಂಬರ್, 22 ರವರೆಗೆ ಅರ್ಜಿ ಸಲ್ಲಿಸಬಹುದು. ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅಡ್ಮಿಟ್ ಕಾರ್ಡ್‍ನೊಂದಿಗೆ ತಮಗೆ ನಿಗಧಿಪಡಿಸಿರುವ ದಿನಾಂಕ ಹಾಗೂ ಸಮಯದಂದು ಅಗತ್ಯ ದಾಖಲಾತಿಗಳೊಂದಿಗೆ ನೇಮಕಾತಿ ರ್ಯಾಲಿ ನಡೆಯುವ ಸ್ಥಳದಲ್ಲಿ ಹಾಜರಿರುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಕಚೇರಿಯಲ್ಲಿ ಪಡೆಯಬಹುದಾಗಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: