ಮೈಸೂರು

ತಾಳ್ಮೆ ಇದ್ದರೆ ಉತ್ತಮ ಛಾಯಾಗ್ರಾಹಕರಾಗಬಹುದು: ಉಮೇಶ್

“ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ”

ಮೈಸೂರು, ಆ.19:- ‘ಆಸಕ್ತಿ ಮತ್ತು ತಾಳ್ಮೆ ಇದ್ದರೆ ಜೀವನದಲ್ಲಿ ಉತ್ತಮ ಛಾಯಾಗ್ರಾಹಕರಾಗಬಹುದು’ ಎಂದು ವನ್ಯಜೀವ ಛಾಯಾಗ್ರಾಹಕರಾದ ಉಮೇಶ್ ಅವರು ಅಭಿಪ್ರಾಯಪಟ್ಟರು.
ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ ಇಂದು ಆಯೋಜಿಸಿದ್ದ ವನ್ಯಜೀವಿ ಛಾಯಾಗ್ರಹಣ ಮತ್ತು ಕಾರ್ಯಗಾರದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ನೈಜ ಘಟನೆ ಮತ್ತು ಸ್ಥಳಗಳಿಗೆ ಸಾಕ್ತಿಯಾಗುವುದೇ ಛಾಯಾಚಿತ್ರಗಳು. ವಸ್ತುಸ್ಥಿತಿಯನ್ನು ಗಮನಿಸಿ ಛಾಯಾಚಿತ್ರ ತೆಗೆದರೆ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಹೇಳಿದರು.
ವನ್ಯಜೀವಿ ಛಾಯಾಗ್ರಹಣ ಮಾಡುವಾಗ ಹೆಚ್ಚಿನ ತಾಳ್ಮೆ ವಹಿಸಬೇಕು. ವನ್ಯಪ್ರಾಣಿ ಮತ್ತು ಪಕ್ಷಿಗಳ ಸೆರೆ ಹಿಡಿಯಲು ದಿನಗಟ್ಟಲೇ ಕಾಯ ಬೇಕಾಗಬಹುದು. ಅದನ್ನು ಸಹಿಸಿಕೊಂಡು ಉತ್ತಮವಾದ ಚಿತ್ರ ತೆಗೆದಾಗ ಸಮಾಜದ ಉತ್ತಮ ಗೌರವ ದೊರೆಯುತ್ತದೆ ಎಂದರು.
ವನ್ಯಜೀವಿಗಳು ತುಂಬಾ ಸೂಕ್ಷ್ಮತೆಯನ್ನು ಹೊಂದಿರುತ್ತವೆ. ಅದಕ್ಕೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಛಾಯಾಚಿತ್ರವನ್ನು ತೆಗೆಯಬೇಕು ಎಂದು ಸಲಹೆ ನೀಡಿದರು.
ಹವ್ಯಾಸಿ ಛಾಯಾಗ್ರಾಹಕರಾದ ಹರ್ಷ ಅವರು ಮಾತನಾಡಿ ಛಾಯಾಗ್ರಹಣ ಸವಾಲಿನ ಕೆಲಸವಾಗಿದ್ದು, ಆಸಕ್ತಿ ಮತ್ತು ಧೈರ್ಯವಿದ್ದರೆ ಉತ್ತಮ ಛಾಯಾಗ್ರಾಹಕರಾಗಬಹುದು ಎಂದರು. ಒಬ್ಬ ಉತ್ತಮ ಛಾಯಾಗ್ರಾಹಕ ಮಾನವಿಯ ಮೌಲ್ಯ ಮತ್ತು ಸೌಜನ್ಯತೆಯನ್ನು ಹೊಂದಿರಬೇಕು. ಸುದ್ದಿಗೆ ತಕ್ಕಂತೆ ಚಿತ್ರಗಳನ್ನು ಸೆರೆಹಿಡಿಯುವ ಕಲೆ ಹೊಂದಿರಬೇಕು ಎಂದು ವಿದ್ಯಾರ್ಥಿನಿಯರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಟಿ. ವಿಜಯ್ ವಹಿಸಿ ಮಾತನಾಡಿದ ಅವರು  ಸಮೂಹ ಮಾಧ್ಯಮಕ್ಕೆ ಛಾಯಾಚಿತ್ರಗಳೇ ಆಧಾರ. ನೈಜಸ್ಥಿತಿಯನ್ನು ತೋರಿಸುವ ಮಾಧ್ಯಮವೇ ಛಾಯಾಚಿತ್ರ ಮಾಧ್ಯಮ. ಸುದ್ದಿಯ ಜೊತೆಗೆ ಉತ್ತಮ ಚಿತ್ರಗಳು ಇದ್ದರೆ, ಅದರ ಮೌಲ್ಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಛಾಯಾಚತ್ರ ಮಾಧ್ಯಮಕ್ಕೆ ಹೆಚ್ಚಿನ ಮಾಹತ್ವ ಇದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ರಾಘವೇಂದ್ರ ಎಸ್.ಜಿ. ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿ ಚೈತ್ರ ಎಸ್.ವಿ. ನಡೆಸಿಕೊಟ್ಟರು. ಸ್ವಾಗತವನ್ನು ಪುಷ್ಮಾ ಜೆ.ಎನ್. ಹಾಗೂ ವಂದನಾರ್ಪಣೆಯನ್ನು ಅರ್ಪಿತಾ ಅವರು ನಡೆಸಿಕೊಟ್ಟರು. (ಎಸ್.ಎಚ್)

Leave a Reply

comments

Related Articles

error: