ಮೈಸೂರು

ನೆರೆ ಹಾನಿಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಕನಿಷ್ಠ 25ಸಾವಿರ ಕೋಟಿ ರೂ. ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ

ಮೈಸೂರು,ಆ.20:- ರಾಜ್ಯದಲ್ಲಾಗಿರುವ ನೆರೆ ಹಾನಿಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಕನಿಷ್ಠ 25ಸಾವಿರ ಕೋಟಿ ರೂ. ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಕಛೇರಿ ಬಳಿ ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ರಾಜ್ಯದಲ್ಲಾಗಿರುವ ನೆರೆ ಹಾನಿಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತೆಂದು ಘೋಷಿಸಿ 25ಸಾವಿರ ಕೋ.ರೂ ಬಿಡುಗಡೆ ಮಾಡಬೇಕು. ನಮ್ಮ ರಾಜ್ಯದ ಸುಮಾರು 17ಜಿಲ್ಲೆಗಳು ನೀರಿನಲ್ಲಿ ಮುಳುಗಿ ಹೋಗಿದೆ. ಸುಮಾರು 2ಕೋಟಿ ಜನರ ಬದುಕು ಬೀದಿಗೆ ಬಂದಿದೆ. ಇವರು ತಮ್ಮ ಜೀವಮಾನದಲ್ಲಿ ಮಾಡಿದ ಸಂಪಾದನೆಯನ್ನೆಲ್ಲಾ ಕಳೆದುಕೊಂಡಿದ್ದಾರೆ. ಹಿಂದೆಂದೂ ಬಾರದ ಭೀಕರ ನೆರೆ ಬಂದು ರಾಜ್ಯದ ಜನರ ಲಕ್ಷಾಂತರ ಕೋ.ರೂ.ನಷ್ಟವಾಗಿದೆ. ಉತ್ತರ ಕರ್ನಾಟಕ ಇನ್ನೂ ಹತ್ತು ವರ್ಷ ಹಿಂದಕ್ಕೆ ಹೋಗಿದೆ. ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು ಕೇಂದ್ರದಿಂದ ನೆರೆಹಾನಿಗೆ ಶಾಶ್ವತ ಪುನರ್ ವಸತಿ ನಿರ್ಮಿಸಿ ಶಾಶ್ವತ ಪರಿಹಾರ ಬಿಡುಗಡೆ ಮಾಡಿಸಿ ರಾಜ್ಯದ ನಿರ್ಗತಿಕ ಪ್ರವಾಹ ಪೀಡಿತ ಜನರ ಬವಣೆ ನೀಗಿಸಲಿ ಎಂದರು.

ಪ್ರತಿಭಟನೆಯಲ್ಲಿ ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷರಾದ ತೇಜೇಶ್ ಲೋಕೇಶ್ ಗೌಡ, ಪ್ರಜೀಶ್ ಪಿ, ಶಾಂತಮೂರ್ತಿ ಆರ್, ಡಾ.ಪಿ.ಶಾಂತರಾಜೇ ಅರಸ್, ಕುಮಾರಗೌಡ, ಮಿನಿ ಬಂಗಾರಪ್ಪ, ಅಕ್ಷಯ್, ಸಿ.ಎಸ್.ನಂಜುಂಡಸ್ವಾಮಿ, ವಿಜಯೇಂದ್ರ, ವಂದನಾ, ಜ್ಯೋತಿ, ಬಸವರಾಜು, ಸುಂದರ್, ಪ್ರದೀಪ್ ರಾಜ್, ವಿನೋದ್ ಪಿ, ಪ್ರೀತಮ್, ಪಿ.ರಾಜೇಶ್, ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: