ಮೈಸೂರು

ಹಲವು ಕಲೆಗಳ ಬೀಡಾಗಿದ್ದ ವಿಜಯನಗರ ಸಾಮ್ರಾಜ್ಯವನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕು : ಹೆಚ್.ಎ.ವೆಂಕಟೇಶ್

ಮೈಸೂರಿನ ಬಲಿಜ ಯುವ ಗರ್ಜನೆ ವತಿಯಿಂದ ಬಲಿಜ ಕುಲತಿಲಕ ಶ್ರೀಕೃಷ್ಣದೇವರಾಯನ ಜಯಂತ್ಯೋತ್ಸವವನ್ನು ವಿಜಯನಗರದ 2ನೇ ಹಂತದ ಶ್ರೀಕೃಷ್ಣದೇವರಾಯನ ವೃತ್ತದಲ್ಲಿ  ಶ್ರೀಕೃಷ್ಣದೇವರಾಯರ  ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಯಿತು.

ಮೈಸೂರು ಪೇಂಟ್ಸ್ ಆ್ಯಂಡ್ ವಾರ್ನಿಷ್ ಅಧ್ಯಕ್ಷ ಹೆಚ್.ಎ.ವೆಂಕಟೇಶ್  ದೀಪ ಬೇಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ದಕ್ಷಿಣ ಭಾರತದ ಇತಿಹಾಸದ ಚರಿತ್ರೆಯುಳ್ಳ  ವಿಜಯನಗರ ಸಾಮ್ರಾಜ್ಯದ ದೊರೆ ಶ್ರೀಕೃಷ್ಣದೇವರಾಯನ ಜಯಂತಿ ಆಚರಿಸಲು ಎಲ್ಲ ಸರ್ಕಾರಗಳು ನಿರ್ಲಕ್ಷ್ಯಿಸಿದ್ದು, ಕಲೆ, ಸಂಸ್ಕೃತಿ, ಸಾಹಿತ್ಯದ ಬೀಡಾಗಿದ್ದ ಅಂದಿನ ವಿಜಯನಗರ ಸಾಮ್ರಾಜ್ಯವನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮ ಕರ್ತವ್ಯ ಎಂದರು.

ಕಾರ್ಯಕ್ರಮದಲ್ಲಿ ಬಲಿಜ ಯುವ ಘರ್ಜನೆಯ ಅಧ್ಯಕ್ಷ ರಾಕೇಶ್ ಬಿ.ಇ, ಸಂಘದ ಉಪಾಧ್ಯಕ್ಷ ಹರೀಶ್ ಕುಮಾರ್, ಕಾರ್ಯದರ್ಶಿ ರಾಘವೇಂದ್ರ ಆರ್,  ಸದಸ್ಯರಾದ ಶಶಿಕುಮಾರ್, ಲೋಕೇಶ್, ಮಂಜುನಾಥ್, ವಸಂತಕುಮಾರ್, ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

comments

Related Articles

error: