ಮೈಸೂರು

ಸುರೇಶ್ ಕುಮಾರ್ ಅವರನ್ನು ಎರಡನೇ ಬಾರಿಗೆ ಸಚಿವರಾಗಿ ಆಯ್ಕೆ ಮಾಡಿರುವುದಕ್ಕೆ ಮೈಸೂರು ಬ್ರಾಹ್ಮಣ ಯುವ ವೇದಿಕೆ ಸ್ವಾಗತ : ರಾಮದಾಸ್ ಗೂ ಸಚಿವ ಸ್ಥಾನ ನೀಡುವಂತೆ ಒತ್ತಾಯ

ಮೈಸೂರು,ಆ.20:- ಕರ್ನಾಟಕದ ಮುಖ್ಯಮಂತ್ರಿಯಾಗಿ ಬಿಎಸ್ ಯಡಿಯೂರಪ್ಪ ಅವರ ಆಡಳಿತದ ಸಚಿವ ಸಂಪುಟದಲ್ಲಿ 17ಶಾಸಕರು ಮಂತ್ರಿಗಳಾಗಿದ್ದು ಮಾದರಿ ಜನಪ್ರತಿನಿಧಿ ಎಂದು ಜನಮನ್ನಣೆ ಪಡೆದಿರುವ ಬ್ರಾಹ್ಮಣ ಸಮುದಾಯದ ಹಿರಿಯ ಮುಖಂಡ  ಮೈಸೂರಿನ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಸುರೇಶ್ ಕುಮಾರ್ ಅವರನ್ನು ಎರಡನೇ ಬಾರಿಗೆ ಸಚಿವರಾಗಿ ಆಯ್ಕೆ ಮಾಡಿರುವುದನ್ನು  ಮೈಸೂರು ಬ್ರಾಹ್ಮಣ ಯುವ ವೇದಿಕೆ ಸ್ವಾಗತಿಸಿದ್ದು, ಅವರನ್ನು ಅಭಿನಂಧಿಸಿದೆ.

ಅದರ ಜೊತೆಯಲ್ಲೇ ಮೈಸೂರಿನ ಹಿರಿಯ ರಾಜಕಾರಣಿ   ಎಸ್. ಎ ರಾಮದಾಸ್ ಅವರು 4ಬಾರಿ ಶಾಸಕರಾಗಿ, ಮಂತ್ರಿಯಾಗಿ ಸೇವೆ ಸಲ್ಲಿಸಿದ್ದು ಹಲವಾರು ಜನಪರ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ, ಕಳೆದ ಬಾರಿ ಇದ್ದ ಬಿಜೆಪಿ ಸರ್ಕಾರದಲ್ಲಿ 4ಮಂದಿ ಬ್ರಾಹ್ಮಣ ಮಂತ್ರಿಗಳಿದ್ದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆಡಳಿತದ ಮೈತ್ರಿ ಸರ್ಕಾರದಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮತ್ತು ಶಂಕರ ಜಯಂತಿಯನ್ನು ಜಾರಿಗೆ ತಂದಿದ್ದರು. ಆದರೆ ಇಂದು ಬ್ರಾಹ್ಮಣ ಕೋಟಾದಲ್ಲಿ ಕೇವಲ ಒಬ್ಬರಿಗೆ ಸಚಿವ ಸ್ಥಾನ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಹಾಗೂ ಬ್ರಾಹ್ಮಣರ ಕೊಡುಗೆ ಬಿಜೆಪಿ ಪಕ್ಷದ ಸಂಘಟನೆಗೆ ಮತ್ತು ಬಿಜೆಪಿ ಅಧಿಕಾರಕ್ಕೆ ಬರಲು ವಿಪ್ರಸಮುದಾಯದ ಶ್ರಮ ಪಾತ್ರ ಬಹಳಷ್ಟಿದೆ. ಮುಂದಿನ ದಿನದಲ್ಲಿ ಬಿಡುಗಡೆಯಾಗುವ ಎರಡನೇ ಪಟ್ಟಿಯಲ್ಲಿ ಎಸ್.ಎ ರಾಮದಾಸರಿಗೆ ಸಚಿವ ಸ್ಥಾನ ನೀಡಬೇಕೆಂದು ಮುಖ್ಯಮಂತ್ರಿ  ಬಿ.ಎಸ್ ಯಡಿಯೂರಪ್ಪನವರನ್ನು ಗೌರವಾಧ್ಯಕ್ಷ ಮುಳ್ಳೂರು ಗುರುಪ್ರಸಾದ್, ಅಧ್ಯಕ್ಷ ಹೆಚ್. ಎನ್ ಶ್ರೀಧರಮೂರ್ತಿ, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: