ಮೈಸೂರು

ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ರಾಷ್ಟ್ರೀಯ ಸದ್ಭಾವನಾ ದಿನ”

ಮೈಸೂರು,ಆ.21:-  ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಭಾರತದ ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನದ ಸ್ಮರಣೆಯಲ್ಲಿ “ರಾಷ್ಟ್ರೀಯ ಸದ್ಭಾವನಾ ದಿನ”ವನ್ನು ನಿನ್ನೆ ಆಚರಿಸಲಾಯಿತು.

ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ತಮ್ಮ ಆಡಳಿತದ ಅವಧಿಯಲ್ಲಿ ರಾಷ್ಟ್ರೀಯ ಸೌಹಾರ್ದತೆಗೆ ವಿಶೇಷವಾಗಿ ಶ್ರಮಿಸಿದರು. ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಅವರ ಜನ್ಮದಿನವನ್ನು “ರಾಷ್ಟ್ರೀಯ ಸದ್ಭಾವನಾ ದಿನ”ವನ್ನಾಗಿ ಆಚರಿಸಲು ಆಗಿನ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದ್ದು, ಅದು ಈಗಲೂ ಮುಂದುವರೆದಿದೆ.

ರಾಷ್ಟ್ರೀಯ ಸದ್ಭಾವನಾ ದಿನಾಚರಣೆಯ ಮಹತ್ವ ಮತ್ತು ಅದರ ಹಿನ್ನಲೆಯನ್ನು ಇಂದಿನ ಯುವ ಜನಾಂಗ ತಿಳಿಯಬೇಕು, ರಾಜೀವ್ ಗಾಂಧಿಯವರು ದೇಶದ ಪ್ರಗತಿಯ ಬಗ್ಗೆ, ಪ್ರಗತಿಪರ ಚಿಂತನೆಗಳ ಬಗ್ಗೆ ಹಾಗೂ ಜನಪರ ಆಲೋಚನೆಗಳನ್ನು ಸಾಕಾರಗಳಿಸುವತ್ತ ಸದಾ ಉತ್ಸುಕರಾಗಿದ್ದರು.

ನಾವು ಮಾಡುವ ಕೆಲಸದಲ್ಲಿ ಯಾವುದೇ ಜಾತಿ, ಧರ್ಮ, ಮತ ಎಂಬ  ಭೇದ ಭಾವ ಎಣಿಸದೇ ಸೌಹಾರ್ದ ಮತ್ತು ಭಾವೈಕ್ಯದಿಂದ ಕಾರ್ಯ ನಿರ್ವಹಿಸಬೇಕೆಂಬ ತತ್ವ ಸಾರುವುದೇ ನಿಜವಾದ ಸದ್ಭಾವನಾ ದಿನಾಚರಣೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಶಾರದ  ತಿಳಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.

ಕಾರ್ಯಕ್ರಮದಲ್ಲಿ   ಉಪಪ್ರಾಂಶುಪಾಲರಾದ ಡಾ.ಜಿ. ಪ್ರಸಾದಮೂರ್ತಿ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳಾದ   ಹೇಮಾವತಿ ಕೆ.ಎಂ. , ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕ ವರ್ಗದವರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. (ಎಸ್.ಎಚ್)

Leave a Reply

comments

Related Articles

error: