ಕ್ರೀಡೆ

ಒಲಿಂಪಿಕ್ಸ್ ಟೆಸ್ಟ್ ಇವೆಂಟ್ ಫೈನಲ್: ಭಾರತಕ್ಕೆ ಗೆಲುವು

ಟೋಕಿಯೊ,.21-ಇಂದು ನಡೆದ ಒಲಿಂಪಿಕ್ಸ್ ಟೆಸ್ಟ್ ಇವೆಂಟ್ ಫೈನಲ್ನಲ್ಲಿ ಭಾರತ ತಂಡ ನ್ಯೂಝಿಲ್ಯಾಂಡ್ ತಂಡವನ್ನು 5-0 ಗೋಲುಗಳಿಂದ ಮಣಿಸಿದೆ.

ನಾಯಕ ಹರ್ಮನ್ಪ್ರೀತ್ ಸಿಂಗ್ 7ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಶಂಶೆರ್ ಸಿಂಗ್ (18ನೇ), ನೀಲಕಂಠ ಶರ್ಮಾ (22ನೇ ನಿ.), ಗುರುಸಾಹಿಬ್ಜೀತ್ ಸಿಂಗ್ (26ನೇ ನಿ.) ಹಾಗೂ ಮನ್ದೀಪ್ ಸಿಂಗ್(27ನೇ ನಿ.) ತಲಾ ಒಂದು ಗೋಲುಗಳಿಸಿ ತಂಡ ಗೆಲುವಿನ ನಗೆ ಬೀರುವಂತೆ ಮಾಡಿದರು.

ಭಾರತ ಟೂರ್ನಿಯ ಲೀಗ್ ಹಂತದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 1-2 ಅಂತರದಿಂದ ಸೋತಿತ್ತು. ಆ ಸೋಲಿಗೆ ತಕ್ಕ ಸೇಡು ತೀರಿಸಿಕೊಂಡಿದೆ. (ಎಂ.ಎನ್)

Leave a Reply

comments

Related Articles

error: