ಮೈಸೂರು

ದಿ.23 ರಿಂದ ಉಡುಪಿ ಶ್ರೀಕೃಷ್ಣ ಮಂದಿರದಲ್ಲಿ ಕೃಷ್ಣ ಜನ್ಮಾಷ್ಟಾಮಿ ಸಂಭ್ರಮ

ಮೈಸೂರು, ಆ. 21 : ನಾರಾಯಣಶಾಸ್ತ್ರೀ ರಸ್ತೆಯ ಉಡುಪಿ ಶ್ರೀಕೃಷ್ಣ ಮಂದಿರದಲ್ಲಿ ಶ್ರೀಕೃಷ್ಣ ಜಯಂತಿ ಮಹೋತ್ಸವ ಅಂಗವಾಗಿ ಆ.23ರಿಂದ 30ರವರೆಗೆ ಪ್ರತಿ ದಿನ ಸಂಜೆ 6.30ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು  ಏರ್ಪಡಿಸಲಾಗಿದೆ.

ಆ.23ರ ರಾತ್ರಿ ದೇವರಿಗೆ ಅಭಿಷೇಕ, ಅರ್ಚನೆ, ನೇವೇದ್ಯ, ಮಹಾಮಂಗಳಾರತಿ ಮತ್ತು ರಾತ್ರಿ 12.12ಕ್ಕೆ  ಆರ್ಘ್ಯ ಪ್ರದಾನ ಮಾಡಲಾಗುವುದು, ಆ.25ರ ಸಂಜೆ 6.30ಕ್ಕೆ ಡಾ.ಕೆ.ಕುಮಾರ್ ಮತ್ತು ಕಲೆಲೆ ಮನೆ ಸಹೋದರಿಯರಿಂದ ಭರತನಾಟ್ಯ, ಆ.26ರಂದು ವಿದ್ವಾನ್ ಕೇಶವಚಂದ್ರ ರಿಂದ ಕೊಳಲು ವಾದನ, ಆ.27ರಂದು ಶ್ರೀಲಲಿತ ಉಳಿಯಾರು ಮತ್ತು ಶ್ರೀಹರಿ ಉಳಿಯಾರು ಮತ್ತು ವೃಂದದವರಿಂದ ದ್ವಂದ್ವ ಹರಿಕಥೆ, ಆ.28ರ ಮಧ್ಯಾಹ್ನ.12ಕ್ಕೆ ಅನ್ನದಾನ, ಸಂಜೆ ವಿದ್ವಾನ್ ಯು.ಎಸ್.ಗೋವಿಂದಸ್ವಾಮಿಯವರಿಂದ ದ್ವಂದ್ವ ಪಿಟೀಲು, ಆ.29ರಂದು ಕೆ.ಶ್ರೀದೇವಿ ದಾಸ್ ಹಾಗೂ ಸಂಗಡಿಗರಿಂದ ದೇವರನಾಮ, ಆ.30ರ ಬೆಳಗ್ಗೆ 10 ಗಮಟೆಯಿಂದ ಭಜನೆ ಹಾಗೂ ಪ್ರಸಾದ ವಿತರಣೆ ನಡೆಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: