ಕರ್ನಾಟಕದೇಶಪ್ರಮುಖ ಸುದ್ದಿ

ಐಫೋನ್‍ ಬೆಲೆಯಲ್ಲಿ ಭಾರೀ ಇಳಿಕೆ ಸಾಧ್ಯತೆ : ಮಧ್ಯಮ ವರ್ಗ ತಲುಪುವ ಉದ್ದೇಶ

ಬೆಂಗಳೂರು: ಭಾರತದಲ್ಲಿ ಮಧ್ಯಮ ವರ್ಗದವರು ಐಫೋನ್ ಕೊಂಡುಕೊಳ್ಳುವ ಯೋಚನೆ ಮಾಡುತ್ತಿರಲಿಲ್ಲ. ಕಾರಣ ಆ್ಯಪಲ್ ಕಂಪನಿಯ ಐಫೋನ್‍ಗಳಲ್ಲಿ ಕಡಿಮೆ ಬೆಲೆಯದ್ದು ಎಂದರೇ 39 ಸಾವಿರ ರೂ. ಇತ್ತು.

ಆದರೆ ಈ ಪರಿಸ್ಥಿತಿ ಸದ್ಯದಲ್ಲೇ ಬದಲಾಗುವ ಸಾಧ್ಯತೆ ಇದೆ. ಮಧ್ಯಮ ವರ್ಗದ ಜನರೂ ಐಫೊನ್ ಕೊಳ್ಳುವಂತೆ ಮಾಡುವ ಉದ್ದೇಶದಿಂದ ಶೀಘ್ರದಲ್ಲೇ ಬೆಂಗಳೂರಿನ ಪೀಣ್ಯದಲ್ಲಿ ಐಫೋನ್ ಉತ್ಪಾದನಾ ಕೇಂದ್ರ ಆರಂಭವಾಗಲಿದ್ದು, ಕೇಂದ್ರ ಸರ್ಕಾರ ತೆರಿಗೆ ವಿನಾಯ್ತಿ ನೀಡಿರುವುದರಿಂದ ಇಲ್ಲಿಂದ ಮಾರುಕಟ್ಟೆಗೆ ಬರುವ ಮೊಬೈಲ್ ಬೆಲೆಯೂ ಕಡಿಮೆಯಾಗಲಿದೆ.

ದೇಶೀಯ ಉತ್ಪಾದನೆಯಾದ್ದರಿಂದ ಉತ್ಪಾದನಾ ವೆಚ್ಚವೆಲ್ಲವೂ ಕಡಿಮೆ. ಹೀಗಾಗಿ, ಮುಕ್ಕಾಲು ಪಾಲು ಕಡಿಮೆ ಬೆಲೆಯಲ್ಲಿ ಐಫೋನ್ ಲಭ್ಯವಾಗುವ ಸಾಧ್ಯತೆ ಇದೆ. 2016-17ರಲ್ಲಿ ಆ್ಯಪಲ್ ಸಂಸ್ಥೆಯು ಒಂದು ಕೋಟಿ ಫೋನ್‍ಗಳನ್ನು ಮಾರುವ ಉದ್ದೇಶ ಹೊಂದಿದೆ.

ಭಾರತದಲ್ಲಿ ಸ್ಯಾಮ್ಸಂಗ್, ಷಿಯಾಮಿ, ವಿವೋ ಕಂಪನಿಗಳ ಮೊಬೈಲ್‍ಗಳು 15 ಸಾವಿರಕ್ಕೂ ಕಡಿಮೆ ಬೆಲೆಯುಳ್ಳವಾದ್ದರಿಂದ ಹೆಚ್ಚು ಮಾರಾಟವಾಗುತ್ತಿವೆ. ಈ ದೃಷ್ಟಿಯಿಂದ ಗ್ರಾಹಕರ ಕೈಗೆಟುಕಬಹುದಾದ ಅಗ್ಗದ ಬೆಲೆಯ ಫೋನ್ ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆ ಆಕ್ರಮಿಸುವ ಉದ್ದೇಶದೊಂದಿಗೆ ಆ್ಯಪಲ್ ಸಂಸ್ಥೆ ಯೋಜನೆ ರೂಪಿಸಿದೆ.

Leave a Reply

comments

Related Articles

error: