ಕರ್ನಾಟಕಮನರಂಜನೆ

ಮಾರುಕಟ್ಟೆಗೆ ಲಗ್ಗೆಯಿಟ್ಟ `ಪೈಲ್ವಾನ್ ಗಣೇಶ’

ಬೆಂಗಳೂರು,ಆ.22-ಗಣೇಶ ಹಬ್ಬ ಸಮೀಪಿಸುತ್ತಿದೆ. ಪ್ರತಿ ಸಲ ವಿವಿಧ ಹಾಗೂ ಹೊಸ ಬಗೆಯ ಗಣೇಶನ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಅದೇ ರೀತಿ ಈ ಬಾರಿ `ಪೈಲ್ವಾನ್ ಗಣೇಶ’ ಬಂದಿದ್ದಾನೆ.

ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದ ಕ್ರೇಜ್ ನಿಂದಾಗಿ ಪೈಲ್ವಾನ್ ಗಣೇಶನನ್ನು ತಯಾರು ಮಾಡಲಾಗಿದೆ. ಸುದೀಪ್ ಸ್ಟೈಲ್ ನಲ್ಲಿ ಗಣೇಶ ತೊಡೆ ತಟ್ಟಿ ನಿಂತಿದ್ದಾನೆ. ಪೈಲ್ವಾನ್ ಗಣೇಶನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆದರೆ ಈ ಮೂರ್ತಿ ಯಾವ ಊರಿನಲ್ಲಿ ಯಾರು ತಯಾರು ಮಾಡಿದ್ದಾರೆ ಎಂಬುದು ಸದ್ಯಕ್ಕೆ ತಿಳಿದಿಲ್ಲ.

ಸೆಪ್ಟೆಂಬರ್ 2 ರಂದು ಗಣೇಶ್ ಹಬ್ಬವಿದ್ದು, ಅದೇ ದಿನ ಸುದೀಪ್ ಹುಟ್ಟುಹಬ್ಬ ಕೂಡ. ಸೆಪ್ಟೆಂಬರ್ ಎರಡನೇ ವಾರದಲ್ಲಿ ಪೈಲ್ವಾನ್ ಸಿನಿಮಾ ಬಿಡುಗಡೆಯಾಗಲಿದೆ. ಇಂದು ಮಧ್ಯಾಹ್ನ 1 ಗಂಟೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. (ಎಂ.ಎನ್)

Leave a Reply

comments

Related Articles

error: