ಮನರಂಜನೆ

ಸಿನಿಮಾವೊಂದಕ್ಕೆ 640 ಕೋಟಿ ರೂ. ಸಂಭಾವನೆ ಪಡೆಯುವ ನಟ ಡ್ವೇನ್ ಜಾನ್ಸನ್.!

ವಾಷಿಂಗ್‍ಟನ್/ಲಾಸ್ ಏಂಜೆಲ್ಸ್,ಆ.22-ಮಾಜಿ ಕುಸ್ತಿಪಟು, ನಟ ಡ್ವೇನ್ ಜಾನ್ಸನ್ ಜಗತ್ತಿನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಡ್ವೇನ್ ಜಾನ್ಸನ್ ಸಿನಿಮಾವೊಂದಕ್ಕೆ 640 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಆ ಮೂಲಕ ಹಾಲಿವುಡ್ ನ ಅತ್ಯಧಿಕ ಗಳಿಕೆಯ ನಟ ಎನ್ನಿಸಿಕೊಂಡಿದ್ದಾರೆ.

ಅವೆಂಜರ್ಸ್ ಖ್ಯಾತಿಯ ಕ್ರಿಸ್ ಹೆಮ್ಸ್‍ವರ್ಥ್ ಹಾಗೂ ಹಾಲಿವುಡ್‍ನ ಪ್ರಖ್ಯಾತ ನಟರಾದ ಬ್ರಾಡ್ಲೆ ಕೂಪರ್, ರಾಬರ್ಟ್ ಡೌನ್ನೆ ಜ್ಯೂನಿಯರ್ ಮೊದಲಾದವರನ್ನು ಜಾನ್ಸನ್ ಗಳಿಕೆಯಲ್ಲಿ ಹಿಂದಿಕ್ಕಿದ್ದಾರೆ. ಕಳೆದ 12 ತಿಂಗಳಿನಲ್ಲಿ ದಿ ರಾಕ್ ಖ್ಯಾತಿಯ ನಟ 89.3 ದಶಲಕ್ಷ ಡಾಲರ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ ಎಂದು ಫೋಬ್ರ್ಸ್ ನಿಯತಕಾಲಿಕ ಪ್ರಕಟಿಸಿರುವ ಪಟ್ಟಿಯು ದೃಢಪಡಿಸಿದೆ.

ಡ್ವೇನ್ ಜಾನ್ಸನ್ ಅಭಿನಯದ ಫಾಸ್ಟ್ ಅಂಡ್ ಪ್ಯೂರಿಯಸ್‍ನ ಹಬ್ಸ್ ಅಂಡ್ ಶಾ ಸಿನಿಮಾ ಈವರೆಗೆ ವಿಶ್ವಾದ್ಯಂತ 5 ಶತಕೋಟಿ ಡಾಲರ್ ಗಳಿಸಿ ಹಿಂದಿನ ದಾಖಲೆಗಳನ್ನು ಪುಡಿಗಟ್ಟಿದೆ. ಜಾನ್ಸನ್ ಅಭಿನಯದ ಬಹುತೇಕ ಸಿನಿಮಾಗಳು ಬಾಲಿವುಡ್ ಬಾಕ್ಸ್ ಆಫೀಸ್‍ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.

ಅಜಾನುಬಾಹು ಜಾನ್ಸನ್ ಈ ಹಿಂದೆ ಕುಸ್ತಿಪಟುವಾಗಿದ್ದಾಗ ಹೆವಿ ವೇಯ್ಟ್ ಎದುರಾಳಿಗಳನ್ನು ಬಗ್ಗುಬಡಿದು ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದರು. ಸಿನಿಮಾ ರಂಗಕ್ಕೂ ಪ್ರವೇಶಿಸಿ ಅಲ್ಲಿಯೂ ಸೂಪರ್‍ಸ್ಟಾರ್‍ಗಳನ್ನು ಹಿಂದಿಕ್ಕಿ ಅದ್ಭುತ ನಟ ಎನಿಸಿಕೊಂಡಿದ್ದಾರೆ.

1999ರಲ್ಲಿ ಬಿಹ್ಯಾಂಡ್ ದಿ ಮ್ಯಾಟ್ ಎಂಬ ಸಾಕ್ಷ್ಯಾಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಜಾನ್ಸನ್ 2001ರಲ್ಲಿ ಮಮ್ಮಿ ರಿಟನ್ರ್ಸ್ ಸಿನಿಮಾ ಮೂಲಕ ಹಾಲಿವುಡ್ ಪ್ರವೇಶಿಸಿದರು. ಸೂಪರ್‍ಹಿಟ್ ದಿ ಸ್ಕಾರ್ಪಿಯನ್ ಕಿಂಗ್, ವಾಕಿಂಗ್ ಟಾಲ್, ಜರ್ನಿ, ಹರ್ಕಿಲ್ಯೂಸ್, ಫಾಸ್ಟ್ ಅಂಡ್ ಫ್ಯೂರಿಯಸ್, ಫಾಸ್ಟರ್, ಆಂಡ್ರಿಯಾಸ್, ರ್ಯಾಂಪೇಜ್ ಸೇರಿದಂತೆ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆಕ್ಷನ್, ಸೈನ್ಸ್ ಫಿಕ್ಷನ್, ಕಾಮಿಡಿ ಎಲ್ಲ ಪಾತ್ರಗಳನ್ನು ನಿಭಾಯಿಸಬಲ್ಲ ಈ ನಟನಿಗೆ ಪ್ರಪಂಚದಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. (ಎಂ.ಎನ್)

 

Leave a Reply

comments

Related Articles

error: