ಮೈಸೂರು

ಮೈಸೂರು ವಿವಿ ಪ್ರಭಾರ ಕುಲಪತಿಯಾಗಿ ಡಾ.ದಯಾನಂದ ಮಾನೆ

ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರಭಾರ ಕುಲಪತಿಗಳನ್ನಾಗಿ ಡಾ.ದಯಾನಂದ ಮಾನೆ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಮೈಸೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿಗಳ ಕಚೇರಿಯಲ್ಲಿ ಪ್ರೊ.ಯಶವಂತ ಡೋಂಗ್ರೆ ಅವರು  ಡಾ.ದಯಾನಂದ ಮಾನೆ ಅವರಿಗೆ ಶನಿವಾರ ಸಾಯಂಕಾಲ 4.30ರ ಸುಮಾರಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ಈ ಸಂದರ್ಭ ಕುಲಸಚಿವ ಪ್ರೊ. ರಾಜಣ್ಣ, ಪ್ರೊ.ಬಸವರಾಜು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ.ದಯಾನಂದ ಮಾನೆ ಪಬ್ಲಿಕ್ ಆಡ್ಮಿನಿಸ್ಟ್ರೇಶನ್ ನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸರ್ಕಾರದ ಮುಂದಿನ ಆದೇಶದವರೆಗೆ  ಡಾ.ದಯಾನಂದ ಮಾನೆ ಪ್ರಭಾರ ಕುಲಪತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

Leave a Reply

comments

Related Articles

error: