ಕ್ರೀಡೆಪ್ರಮುಖ ಸುದ್ದಿ

ಸಹ ಆಟಗಾರ್ತಿಯನ್ನೇ ಸಲಿಂಗ ವಿವಾಹವಾಗಿದ್ದ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕಿ ಆಮಿ ಈಗ ಗರ್ಭಿಣಿ !

ದೇಶ(ನವದೆಹಲಿ)ಆ.22:-  ಸಹ ಆಟಗಾರ್ತಿಯನ್ನೇ ವಿವಾಹವಾಗಿದ್ದ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಆಮಿ ಸ್ಯಾಟರ್ತ್‌ ವೈಟ್ 2020ರ ಆರಂಭದಲ್ಲಿ  ತನ್ನ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರಂತೆ !

ಆಮಿ ಸ್ಯಾಟರ್ತ್‌ ವೈಟ್ ತಮ್ಮದೇ ತಂಡದ ಮಹಿಳಾ ಕ್ರಿಕೆಟ್ ಆಟಗಾರ್ತಿ  ಲೀ ತಹುಹು ಅವರನ್ನು ಮಾರ್ಚ್ 2017 ರಲ್ಲಿ ವಿವಾಹವಾಗಿದ್ದರು. ವೈಟ್ ಸನ್ಸ್ ನಾಯಕಿ ಆಮಿ ಸ್ಯಾಟರ್ತ್ ವೈಟ್ ಈಗ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡಿದ್ದಾರೆ.

ಆಮಿ ಸ್ಯಾಟರ್ತ್ ವೈಟ್ ಮುಂದಿನ ವರ್ಷದ ಆರಂಭದಲ್ಲಿ ತನ್ನ ಮತ್ತು ಲೀ ತಹುಹು ಅವರ ಮಗುವಿಗೆ ಜನ್ಮ ನೀಡಲಿದ್ದಾರೆ. ಮಹಿಳಾ ಕ್ರಿಕೆಟಿಗರಿಬ್ಬರೂ ಯುವ ಅತಿಥಿಗಳನ್ನು ಸ್ವಾಗತಿಸುವಲ್ಲಿ ನಿರತರಾಗಿದ್ದಾರೆ.   ಆಮಿ ಸ್ಯಾಟರ್ತ್ ವೈಟ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ತಾನು ಮತ್ತು ತನ್ನ ಸಂಗಾತಿ ಲೀ ತಹುಹು ಶೀಘ್ರದಲ್ಲೇ ಮೂವರಾಗಲಿದ್ದೇವೆ ಎಂದಿದ್ದಾರೆ.

ಆಮಿ ಸ್ಯಾಟರ್ತ್‌ ವೈಟ್ ತನ್ನ ಟ್ವಿಟರ್‌ನಲ್ಲಿ “ಹೊಸ ವರ್ಷದಲ್ಲಿ ನನ್ನ ಮೊದಲ ಮಗುವಿಗೆ ಜನ್ಮ ನೀಡಲಿದ್ದೇನೆ. ಲೀ ಮತ್ತು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಎದುರು ನೋಡುತ್ತಿದ್ದೇವೆ. ಈ ಹೊಸ ಅನುಭವದ ಬಗ್ಗೆ ನಾವು ಎಷ್ಟು ಉತ್ಸುಕರಾಗಿದ್ದೇವೆಂದರೆ ಅದನ್ನು ವಿವರಿಸಲು ನನಗೆ ಪದಗಳಿಲ್ಲ ಎಂದು ಬರೆದುಕೊಂಡಿದ್ದಾರೆ.

ಆಮಿ ಸ್ಯಾಟರ್ತ್ ವೈಟ್ ಮತ್ತು ಲೀ ತಹುಹು ಮಾರ್ಚ್ 2017 ರಲ್ಲಿ  ವಿವಾಹವಾಗಿದ್ದರು. ಸುಮಾರು 8 ವರ್ಷಗಳ ಕಾಲ ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ತಿಳಿದಿದ್ದರು. 2014 ರಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕುಟುಂಬಕ್ಕಾಗಿ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಳ್ಳಲು ನ್ಯೂಜಿಲೆಂಡ್ ಕ್ರಿಕೆಟ್‌ನಿಂದ ಸಹಾಯ ಪಡೆದಿರುವುದು ತುಂಬಾ ಅದೃಷ್ಟ ಎಂದು   ಹೇಳಿದ್ದಾರೆ.

ಆಮಿ ಸ್ಯಾಟರ್ತ್‌ ವೈಟ್ ಆಟಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬಾಕಿ ಉಳಿದಿದೆ. ನಮ್ಮ ದೃಷ್ಟಿ ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ 2021 ಐಸಿಸಿ ಮಹಿಳಾ ವಿಶ್ವಕಪ್‌ನತ್ತ ನೆಟ್ಟಿದೆ ಎಂದಿದ್ದಾರೆ. ಆದರೆ, ಈ ಸಮಯದಲ್ಲಿ ಅವರು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. (ಎಸ್.ಎಚ್)

Leave a Reply

comments

Related Articles

error: