Uncategorized

`ಪೈಲ್ವಾನ್’ ಸಿನಿಮಾದ ಟ್ರೇಲರ್ ರಿಲೀಸ್

ಬೆಂಗಳೂರು,ಆ.22-ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.

ಟ್ರೇಲರ್ ರಿಲೀಸ್ ಆಗಿ ಒಂದು ಗಂಟೆ ಕಳೆಯುವ ವೇಳೆಗೆ 35ಕೆ ವೀವ್ಸ್ ಆಗಿದೆ. ಅಲ್ಲದೆ, ಟ್ರೇಲರ್ ಮೆಚ್ಚುಗೆ ಗಳಿಸಿದೆ.

ಟ್ರೇಲರ್ ನಲ್ಲಿ ಆ್ಯಕ್ಷನ್ ಮತ್ತು ಡೈಲಾಗ್ ಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. `ನಾನು ಗೆಲ್ತಿನೋ.. ಇಲ್ವೋ.. ನನಗೆ ಗೊತ್ತಿಲ್ಲ ಆದ್ರೆ, ಸೋಲನ್ನು ಮಾತ್ರ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ’ ಎಂದು ಸುದೀಪ್ ಅಬ್ಬರಿಸಿದ್ದಾರೆ. ಸುದೀಪ್ ಪಾತ್ರದ ಹೆಸರು ಕಿಚ್ಚ ಎನ್ನುವುದು ಟ್ರೇಲರ್ ಮೂಲಕ ತಿಳಿದಿದೆ.

ಟ್ರೇಲರ್ ನಲ್ಲಿ ಸುದೀಪ್, ಸುನೀಲ್ ಶೆಟ್ಟಿ, ಒಂದು ಫ್ರೇಮ್ ನಲ್ಲಿ ನಾಯಕಿ ಆಕಾಂಕ್ಷ ಸಿಂಗ್ ಬಂದು ಹೋಗುತ್ತಾರೆ. ಹೆಚ್ಚಾಗಿ ಸುದೀಪ್ ಕಾಣಿಸಿಕೊಳ್ಳುತ್ತಾರೆ.

ಸಿನಿಮಾವನ್ನು ಕೃಷ್ಣ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಸಿನಿಮಾಗಿದೆ. ಸಿನಿಮಾ ಸೆ. 12 ರಂದು ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. (ಎಂ.ಎನ್)

Leave a Reply

comments

Related Articles

error: