ಮೈಸೂರು

‘ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿರಾಯಣ್ಣ’ ಪ್ರಬಂಧ ಸ್ಪರ್ಧೆ ವಿಜೇತರು

70ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೈಸೂರು ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‍ಮೆಂಟ್ ಸಂಸ್ಥೆಯಿಂದ ಈಚೆಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ‘ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿರಾಯಣ್ಣ’ ವಿಷಯವಾಗಿ ಕಳೆದ ಆಗಸ್ಟ್ 13ರಂದು ಸ್ಪರ್ಧೆಯು ಜರುಗಿದ್ದು ನಗರದ ವಿವಿಧ ಕಾಲೇಜುಗಳ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾಲೇಜಿನ ವಿದ್ಯಾರ್ಥಿಗಳಾದ ಮನೋಜ್ ಕುಮಾರ, ವೆನಿಲ ಹಾಗೂ ಜೀನಿಯಸ್ ಪಿ.ಯು. ಕಾಲೇಜಿನ ಕೀರ್ತನಾ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.

Leave a Reply

comments

Related Articles

error: