ಪ್ರಮುಖ ಸುದ್ದಿಮೈಸೂರು

ಹಿರಿಯ ಚಿತ್ರಕಲಾವಿದ ಕಲ್ಬುರ್ಗಿಯ ಮಲ್ಲಿಕಾರ್ಜುನ ಎಂ ಕೋರವಾರಕರ್ ಗೆ ಎಂ.ವೀರಪ್ಪ ದತ್ತಿ ಪ್ರಶಸ್ತಿ

ಮೈಸೂರು,ಆ.22 : ಜೆಎಸ್ಎಸ್ ವಿದ್ಯಾಪೀಠದಿಂದ ಕೊಡಮಾಡಲ್ಪಡುವ ಚಿತ್ರರಚನಾ ಪಿತಾಮಹ  ಎಂ.ವೀರಪ್ಪ ದತ್ತಿ 2019ನೇ ಸಾಲಿನ ಪ್ರಶಸ್ತಿಗೆ ಕಲ್ಬುರ್ಗಿಯ  ಮಲ್ಲಿಕಾರ್ಜುನ ಎಂ ಕೋರವಾರಕರ್ ರವರು ಭಾಜನರಾಗಿದ್ದಾರೆ.

ಹಿರಿಯ ಚಿತ್ರಕಲಾವಿದರಾಗಿರುವ ಮಲ್ಲಿಕಾರ್ಜುನ ಎಂ.ಕೋರವಾರಕರ್ ಅವರು ಕಲಬುರಗಿ ಜಿಲ್ಲೆಯ ಕೋರವಾರದಲ್ಲಿ ಜನಿಸಿದರು, ಪೆಂಟಿಂಗ್ ಡಿಪ್ಲೊಮೊ ಗಳಿಸಿ ಮುಂಬಯಿನ ಮೆ.ಎಂ.ಬಿ.ಕೋಟಕರ ಪ್ರಚಾರ ಸಂಖ್ಯೆಯಲ್ಲಿ ಕೆಲವು ವರ್ಷ ಸೇವೆ ಸಲ್ಲಿಸಿದ್ದಾರೆ. ಬಳಿಕ ನಿರಾಲಾ ಆರ್ಟ್ಸ್ ಎಂಬ ಸ್ವಂತ ಸಂಸ್ಥೆ ಸ್ಥಾಪಿಸಿ ಸಿನಿಮಾ ಪೋಸ್ಟರ್ ಗಳ ಡಿಸೈನ್, ಸ್ಕ್ರೀನ್ ಪ್ರಿಂಟ್, ಶೋ ಕಾರ್ಡ್ ಗಳನ್ನು ಸಿದ್ದಪಡಿಸುವ ಮೂಲಕ ಕಲಾ ಪ್ರಪಂಚದಲ್ಲಿ ಖ್ಯಾತಿ ಗಳಿಸಿದ್ದಾರೆ.

ಚಿತ್ರಕಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೈಸೂರಿನ ಟಾಯ್ಸ್ ಕಂಪನಿಯ ಸ್ಥಾಪಕರು ಹಾಗೂ ಚಿತ್ರಕಲಾವಿದರಾದ ಎಂ.ವೀರಪ್ಪನವರ ಹೆಸರಿನಲ್ಲಿ ಅವರ ಮಗ ಪ್ರಫುಲ್ಲಚಂದ್ರ ವೀರಪ್ಪ ಹಾಗೂ ಅವರ ಮೊಮ್ಮಗ ಸತೀಶ್ ಪ್ರಫುಲ್ಲಚಂದ್ರರವರು ಜೆಎಸ್ಎಸ್ ವಿದ್ಯಾಪೀಠದಲ್ಲಿ ಸ್ಥಾಪಿಸಿರುವ ದತ್ತಿ ವತಿಯಿಂದ 2015ರಿಂದ ಪ್ರತಿ ವರ್ಷ ಪ್ರಶಸ್ತಿ ನೀಡಲಾಗುತ್ತಿದೆ. 68 ಸಾವಿರ ರೂ.ಗಳ ಪ್ರಶಸ್ತಿ ಧನ, ಸ್ವಸ್ತಿವಾಚನ ಹಾಗೂ ಪ್ರಶಸ್ತಿ ಪಲಕವನ್ನೊಳಗೊಂಡಿದೆ ಎಂದು ಪ್ರಕಟಣ ವಿಭಾಗದ ನಿರ್ದೇಶಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: