ಕರ್ನಾಟಕ

ನೆರೆ ಸಂತ್ರಸ್ತರಿಗೆ 5 ಲಕ್ಷ ರೂ. ನೀಡಿದ ನಟ ಉಪೇಂದ್ರ

ಬೆಂಗಳೂರು,ಆ.22-ನೆರೆಯಿಂದಾಗಿ ನಲುಗಿ ಹೋಗಿರುವ ಉತ್ತರ ಕರ್ನಾಟಕದ ನೆರವಿಗೆ ನಟ, ನಿರ್ದೇಶಕ ಉಪೇಂದ್ರ ಧಾವಿಸಿದ್ದಾರೆ. ಉಪೇಂದ್ರ ಅವರು, ನೆರೆ ಸಂತ್ರಸ್ತರ ಪರಿಹಾರ ನಿಧಿಗೆ 5 ಲಕ್ಷ ರೂ. ನೆರವು ನೀಡಿದ್ದಾರೆ.

ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದ ಉಪೇಂದ್ರ 5 ಲಕ್ಷ ರೂ. ನ ಚೆಕ್ ಅನ್ನು ಹಸ್ತಾಂತರಿಸಿದರು.

ಪುನೀತ್ ರಾಜ್ ಕುಮಾರ್ 5 ಲಕ್ಷ ರೂ., ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ 25 ಲಕ್ಷ ರೂ. ಅನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದರು. (ಎಂ.ಎನ್)

Leave a Reply

comments

Related Articles

error: