ಪ್ರಮುಖ ಸುದ್ದಿಮೈಸೂರು

ದಸರಾ ಮುಗಿಯುವವರೆಗೆ ಮೈಸೂರು ಜಿಲ್ಲಾಧಿಕಾರಿಯಾಗಿಯೇ ಮುಂದುವರಿಯಲಿರುವ ಅಭಿರಾಮ್ ಜಿ.ಶಂಕರ್

ಮೈಸೂರು,ಆ.22:-  ದಸರಾ ಮುಗಿಯುವವರೆಗೆ ಮೈಸೂರು ಜಿಲ್ಲಾಧಿಕಾರಿಯಾಗಿಯೇ  ಅಭಿರಾಂ ಜಿ ಶಂಕರ್ ಅವರೇ ಮುಂದುವರಿಯಲ್ಲಿದ್ದಾರೆ.

ಇಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಆದರೆ ಮೈಸೂರು ನಾಗರೀಕರಿಂದ ಅಭಿರಾಮ್ ಜಿ.ಶಂಕರ್ ಅವರನ್ನು ಇಲ್ಲಿಯೇ ಇರಿಸಿಕೊಳ್ಳುವಂತೆ, ವರ್ಗಾವಣೆ ಆದೇಶ ರದ್ದುಗೊಳಿಸುವಂತೆ ಒತ್ತಾಯ ಕೇಳಿ ಬಂದಿತ್ತು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರು ಖುದ್ದಾಗಿ ಕರೆಮಾಡಿ ದಸರಾ ಮುಗಿಯುವ ತನಕ ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬೇಡಿ ಅವರನ್ನೇ ಮುಂದುವರೆಸಿ ಎಂದು ದೂರವಾಣಿ‌ ಮೂಲಕ ಮಾತಾನಾಡಿ ಅಭಿರಾಂ ಜಿ ಶಂಕರ್  ಅವರನ್ನು ಇಲ್ಲೇ ಕರ್ತವ್ಯ ನಿರ್ವಹಿಸುವಂತೆ ಮಾಡಿದ್ದಾರೆ.

ಇದಕ್ಕೂ ಮುನ್ನ ಸಚಿವ ಅಶೋಕ್ ಅವರೂ ಕೂಡ ಅಭಿರಾಮ್ ಜಿ.ಶಂಕರ್ ಅವರನ್ನು ದಸರಾ ಮುಗಿಯುವವರೆಗೆ ಇಲ್ಲಿಯೇ ಇರಿಸಿಕೊಳ್ಳುವಂತೆ ತಿಳಿಸಲಾಗುವುದು ಎಂದಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: