ಪ್ರಮುಖ ಸುದ್ದಿಮೈಸೂರು

ಸಂಕಷ್ಟಕ್ಕೆ ಸಿಲುಕಿರುವ ಕೈಗಾರಿಕೆಗಳ ರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ  ಮನವಿ ಸಲ್ಲಿಸಿದ ಕೈಗಾರಿಕೆಗಳ ಸಂಘ

ಮೈಸೂರು,ಆ.23:- ಕೈಗಾರಿಕಾ ಹಿನ್ನೆಡೆ ಮತ್ತು ಅಟೋಮೋಬೈಲ್ ಉದ್ಯಮ ಸಂಕಷ್ಟದ ಕುರಿತು ಸಂಕಷ್ಟಕ್ಕೆ ಸಿಲುಕಿರುವ ಕೈಗಾರಿಕೆಗಳ ರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ಸಚಿವೆ, ನಿರ್ಮಲ ಸೀತಾರಾಮನ್  ಅವರಿಗೆ ಮೈಸೂರು ಕೈಗಾರಿಕೆಗಳ ಸಂಘ ಮನವಿ ಸಲ್ಲಿಸಿದೆ.

ನಿನ್ನೆ ನಗರದ ಸರ್ಕಾರಿ ಅತಿಧಿ ಗೈಹದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ  ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯೇಂದ್ರ ಒ.ಡಿ ಮತ್ತು ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್‍ರವರು ಮನವಿ ಸಲ್ಲಿಸಿ ಉತ್ಪಾದನಾ ವಲಯ ವಿಶೇಷವಾಗಿ ಆಟೊಮೋಬೈಲ್ ವಾಹನ ತಯರಿಕೆ ಕುಂಠಿತಗೊಂಡಿದ್ದು, ಕೈಗಾರಿಕ ವಲಯ 10 ವರ್ಷಗಳ ಅಂತರದಲ್ಲಿ ಮತ್ತೊಂದು ಕೈಗಾರಿಕಾ ಹಿನ್ನೆಡೆಯ ಸವಾಲನ್ನು ಎದುರಿಸಬೇಕಾಗಿದೆ. ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಸಾಲ ಮರುಪಾವತಿಸಲಾಗದ ಹಂತ ತಲುಪುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ದೇಶದಲ್ಲಿ 10 ಲಕ್ಷ ಉದ್ಯೋಗ ಕಡಿತಗೊಳಿಸಬೇಕಾಗಬಹುದು. ಈ ಹಿನ್ನೆಲೆಯಲ್ಲಿ ಸರ್ಕಾರ ತಯಾರಿಕಾ ವಲಯದ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು.

ಇದಕ್ಕೆ ಪೊರಕವಾಗಿ ಆದಾಯ ತೆರಿಗೆಯ ಟಿ.ಡಿ.ಎಸ್ ವಿಳಂಬ ಪಾವತಿಗೆ ವಿಧಿಸುವ ಬಡ್ಡಿ ದಂಡವನ್ನು ಮನ್ನಾ ಮಾಡಬೇಕು, ಜಿ.ಎಸ್.ಟಿ ಬಡ್ಡಿ ಕಡಿಮೆಗೊಳಿಸುವುದು, ಜಿ,ಎಸ್.ಟಿ ವಿಳಂಬ ಪಾವತಿಗೆ, ಜಿ.ಎಸ್.ಟಿ ನೋಂದಾಣಿ ರದ್ದು ಕ್ರಮವನ್ನು ಹಿಂಪಡೆಯಬೇಕು,

ಸಣ್ಣ ಉದ್ಯಮಿಗಳಿಗೆ ಸುಲಭ ಬಡ್ಡಿ ದರದಲ್ಲಿ ಭದ್ರತೆ ರಹಿತ ಸಾಲ ಸುಲಲಿತವಾಗಿ ದೊರೆಯುವಂತಾಗಬೇಕು. ಭಾರತೀಯ ರಿಜರ್ವ ಬ್ಯಾಂಕ್ ಮತ್ತು ರಾಷ್ಟ್ರಿಕೃತ ಬ್ಯಾಂಕ್ ಪ್ರಯತ್ನಗಳ ನಡುವೆಯೂ ಸಣ್ಣ ಕೈಗಾರಿಕೆಗಳು ಮತ್ತು ವ್ಯಾಪಾರಸ್ಥರುಗಳಿಗೆ 7-10% ಮಾತ್ರ ಬ್ಯಾಂಕುಗಳಿಂದ ಸಾಲ ದೊರೆತು ಉಳಿದ 90-93% ಉದ್ಯಮಿಗಳು ಖಸಗಿ ಲೇವಾದೇವಿದಾರರಿಂದ ದುಬಾರಿ ಬಡ್ಡಿ(ಮೀಟರ್ ಬಡ್ಡಿ) ಸಾಲದಿಂದ ವ್ಯಾಪಾರ ನಡೆಸುತ್ತಿರುವುದು ವಿಷಾದನೀಯ ಎಂದು ತಿಳಿಸಿದರು.

ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಗ್ಗೆ ಗಮನ ಹರಿಸುವುದಾಗಿ ಭರವಸೆ ನೀಡಿದರು.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: