ಪ್ರಮುಖ ಸುದ್ದಿವಿದೇಶ

ಜಿ-7 ಶೃಂಗಸಭೆ: ಕಾಶ್ಮೀರ ಸಮಸ್ಯೆ ಬಗ್ಗೆ ಮೋದಿ-ಟ್ರಂಪ್ ಚರ್ಚೆ

ವಾಷಿಂಗ್ಟನ್,.23-ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿರುವ ಬಗ್ಗೆ ಮುಂಬರುವ ಜಿ-7 ಶೃಂಗಸಭೆ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಚರ್ಚಿಸಲಿದ್ದಾರೆ ಎಂದು ಅಮೆರಿಕಾ ಪ್ರಕಟಿಸಿದೆ.

ಆರ್ಟಿಕಲ್ 370 ಮತ್ತು 35ಎ ರದ್ದುಗೊಳಿಸುವುದು ಭಾರತದ ಆಂತರಿಕ ವಿಚಾರ. ಆದರೆ ಅದು ಪ್ರಾದೇಶಿಕವಾಗಿ ಪರಿಣಾಮ ಬೀರಬಹುದು. ಹೀಗಾಗಿ ಜಿ-7 ಶೃಂಗಸಭೆ ವೇಳೆ ಈ ಬಗ್ಗೆ ಮಾತನಾಡಲಿದ್ದಾರೆ. ಪ್ರಾದೇಶಿಕವಾಗಿ ಉದ್ವಿಗ್ನತೆ ಶಮನಗೊಳಿಸುವ ಹಾಗೂ ಮಾನವಹಕ್ಕುಗಳನ್ನು ಎತ್ತಿಹಿಡಿಯುವ ಕ್ರಮಗಳ ಬಗ್ಗೆ ಉಭಯ ಗಣ್ಯರು ಚರ್ಚಿಸುವ ಸಾಧ್ಯತೆ ಇದೆ.

ನಾಳೆ (ಆ.24) ಶೃಂಗಸಭೆ ಆರಂಭವಾಗಲಿದ್ದು, ಟ್ರಂಪ್ ಅವರ ಕಾರ್ಯಸೂಚಿಗಳ ಬಗ್ಗೆ ವಿವರಿಸಿದ ಹಿರಿಯ ಅಧಿಕಾರಿಯೊಬ್ಬರು, ವಾಸ್ತವ ನಿಯಂತ್ರಣ ರೇಖೆಯಲ್ಲಿ ಗಡಿ ನುಸುಳುವಿಕೆಯನ್ನು ಪಾಕಿಸ್ತಾನ ತಡೆಯಬೇಕು ಹಾಗೂ ತನ್ನ ನೆಲದಿಂದ ಸಂಘಟನೆಗಳು ಭಾರತದ ಮೇಲೆ ದಾಳಿ ನಡೆಸುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು.

ಭಾರತಪಾಕಿಸ್ತಾನ ಸಂಬಂಧಗಳ ವಿಚಾರ ಚರ್ಚೆಗೆ ಬರಲಿದೆ. ನರೇಂದ್ರ ಮೋದಿಯವರು ಪ್ರಾದೇಶಿಕ ಉದ್ವಿಗ್ನತೆ ಶಮನಕ್ಕೆ ಮತ್ತು ಮಾನವ ಹಕ್ಕುಗಳನ್ನು ಎತ್ತಿಹಿಡಿಯುವ ಸಲುವಾಗಿ ಯಾವ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬ ಬಗ್ಗೆ ಟ್ರಂಪ್ ಆಲಿಸಲಿದ್ದಾರೆ ಎಂದು ವಿವರಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: