ಕ್ರೀಡೆ

ವಿಂಡೀಸ್ ವಿರುದ್ಧದ ಟೆಸ್ಟ್: ಟೀಂ ಇಂಡಿಯಾಗೆ ಆಸರೆಯಾದ ಅಜಿಂಕ್ಯಾ ರಹಾನೆ

ಆಂಟಿಗುವಾ,.23-ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಕ್ರಿಕೆಟ್ ನ ಮೊದಲ ದಿನದ ಅಂತ್ಯದಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿದೆ.

ವಿಂಡೀಸ್ ದಾಳಿಗೆ ಸಂಕಷ್ಟಕ್ಕೆ ಸಿಲುಕಿದ ಭಾರತ ತಂಡಕ್ಕೆ ಅಜಿಂಕ್ಯಾ ರಹಾನೆಯವರ ಅರ್ಧಶತಕ ಆಸರೆಯಾಯಿತು.

ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಬೌಲರ್ಗಳಾದ ಕೆಮರ್ ರೂಚ್, ಶನನ್ ಗ್ಯಾಬ್ರಿಯಲ್ ಭಾರತ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಒಂದು ಹಂತದಲ್ಲಿ ಭಾರತ 25 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ತಂಡಕ್ಕೆ ಆಸರೆಯಾದ ಅಜಿಂಕ್ಯಾ ರಹಾನೆಯ 81 ರನ್ಗಳ ನೆರವಿನೊಂದಿಗೆ ಭಾರತ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ಸಾಧ್ಯವಾಯಿತು.

ಆರಂಭಿಕ ಆಟಗಾರ ಕೆ.ಎಲ್.ರಾಹುಲ್ (44) ಅವರಿಂದ ಉತ್ತಮ ಬೆಂಬಲ ಪಡೆದ ರಹಾನೆ, ನಾಲ್ಕನೇ ವಿಕೆಟ್ಗೆ 68 ರನ್ ಕಲೆ ಹಾಕಿದರು. ಜತೆಗೆ ಐದನೇ ವಿಕೆಟ್ಗೆ ಹನುಮ ವಿಹಾರಿ (32) ಜತೆ 82 ರನ್ ಕಲೆ ಹಾಕಿ ಚೇತರಿಕೆಗೆ ಕಾರಣರಾದರು. ನಾಲ್ಕು ಗಂಟೆಗಳ ಕಾಲ ಕ್ರೀಸ್ನಲ್ಲಿದ್ದು, 163 ಎಸೆತ ಎದುರಿಸಿದ ರಹಾನೆ ದಿನದ ಕೊನೆಯವರಾಗಿ ಔಟ್ ಆದರು.

ವೇಗಿಗಳಿಗೆ ನೆರವಾಗುತ್ತಿದ್ದ ಪಿಚ್ನಲ್ಲಿ ರೋಚ್ ಹಾಗೂ ಗ್ಯಾಬ್ರಿಯಲ್, ಭಾರತದ ಅಗ್ರ ಕ್ರಮಾಂಕವನ್ನು ಇನ್ನಿಲ್ಲದಂತೆ ಕಾಡಿದರು. ಆದರೆ ಕೆ.ಎಲ್.ರಾಹುಲ್ ಹಾಗೂ ರಹಾನೆ ಸಮಯೋಚಿತ ಆಟವಾಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. (ಎಂ.ಎನ್)

Leave a Reply

comments

Related Articles

error: