ಮನರಂಜನೆ

ಡಾಲಿ ಧನಂಜಯ್ ಗೆ ಹೊಸ ಬಿರುದು ನೀಡಿದ ನಟ ದುನಿಯಾ ವಿಜಯ್

ಬೆಂಗಳೂರು,ಆ.23-ಡಾಲಿ ಖ್ಯಾತಿಯ ನಟ ಧನಂಜಯ್ ಅವರಿಗೆ ನಟ ದುನಿಯಾ ವಿಜಯ್ ಹೊಸ ಬಿರುದು ನೀಡಿದ್ದಾರೆ.

ಡಾಲಿ ಧನಂಜಯ್ ಅವರಿಗೆ ‘ಸಾಮ್ರಾಟ್’ ಧನಂಜಯ್ ಎಂದು ಕರೆದಿದ್ದು, ಸಲಗ ಪೋಸ್ಟರ್ ನಲ್ಲೂ ‘ಸಾಮ್ರಾಟ್’ ಎಂದೇ ಸಂಬೋಧಿಸಿದ್ದಾರೆ. ವಿಶೇಷ ಅಂದ್ರೆ ದುನಿಯಾ ವಿಜಯ್ ಅವರ ಮಗನ ಹೆಸರು ಕೂಡ ಸಾಮ್ರಾಟ್.

ದುನಿಯಾ ವಿಜಯ್ ನಿರ್ದೇಶನದ ಚೊಚ್ಚಲ ಚಿತ್ರ ‘ಸಲಗ’ದಲ್ಲಿ ಧನಂಜಯ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಧನಂಜಯ್ ಅವರ ಗೆಟಪ್, ಪೋಸ್ಟರ್ ಗಳು ಬಹಿರಂಗವಾಗಿದ್ದು, ಸಖತ್ ಸ್ಟೈಲಿಶ್ ಆಗಿದೆ. ಈಗ ಧನಂಜಯ್ ಹುಟ್ಟುಹಬ್ಬದ ವಿಶೇಷವಾಗಿ ದುನಿಯಾ ವಿಜಯ್ ಹೊಸ ಪೋಸ್ಟರ್ ಬಿಟ್ಟಿದ್ದಾರೆ.

ಇನ್ನುಳಿದಂತೆ ಡಾಲಿ ಪಿಕ್ಚರ್ಸ್ ಎಂಬ ಹೊಸ ನಿರ್ಮಾಣ ಸಂಸ್ಥೆ ಹುಟ್ಟುಹಾಕಿರುವ ಧನಂಜಯ್, ‘ಬಡವ ರಾಸ್ಕಲ್’ ಎಂಬ ಸಿನಿಮಾ ಆರಂಭಿಸಿದ್ದಾರೆ. ಇದರ ಜೊತೆಗೆ ‘ಪೊಗರು’, ‘ಯುವರತ್ನ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ದುನಿಯಾ ಸೂರಿ ನಿರ್ದೇಶನ ‘ಪಾಪ್ ಕಾರ್ನ್ ಮಂಕಿ’ ಟೈಗರ್ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. (ಎಂ.ಎನ್)

 

Leave a Reply

comments

Related Articles

error: