
ಪ್ರಮುಖ ಸುದ್ದಿಮೈಸೂರು
ಮಾಜಿ ಗೃಹ ಸಚಿವ ಪಿ.ಚಿದಂಬರಮ್ ಬಂಧನ ರಾಜಕೀಯ ಪ್ರೇರಿತವಲ್ಲ : ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಸ್ಪಷ್ಟನೆ
ಮೈಸೂರು,ಆ.23:- ಮಾಜಿ ಗೃಹ ಸಚಿವ ಪಿ.ಚಿದಂಬರಮ್ ಬಂಧನ ರಾಜಕೀಯ ಪ್ರೇರಿತವಲ್ಲ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಅವರಿಂದು ಮೈಸೂರಿನಲ್ಲಿ ಮಾದ್ಯಮಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದಾರೆ. ಸಿಬಿಐಗೆ ವಿಚಾರಣೆ ಮಾಡಿ ಅಂತ ಕೊಟ್ಟಿದ್ದಾರೆ. ಇನ್ ಕಮ್ ಟ್ಯಾಕ್ಸ್ ನವರಿಗೆ ಸರಿಯಾಗಿ ಕೋ ಅಪರೇಟಿವ್ ಮಾಡ್ತಿಲ್ಲ ಅಂತ ಐದು ದಿನಗಳ ಕಾಲ ವಿಚಾರಣೆಗೆ ನೀಡಿದ್ದಾರೆ. ಯಾವ ರೀತಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದಾರೆ. ದೇಹಲಿ ಹೈಕೋರ್ಟ್ ಅವರಿಗೆ ಜಾಮೀನು ನೀಡಿಲ್ಲ. ಇನ್ ಕಮ್ ಟ್ಯಾಕ್ಸ್, ಸಿಬಿಐ ನವರು ಅವರನ್ನು ಬಂಧಿಸಿದ್ದಾರೆ. ಐದು ದಿನಗಳ ಕಾಲ ಕಸ್ಟಡಿಗೆ ಕೊಟ್ಟಿದ್ದಾರೆ. ಸಿಬಿಐ ಕಛೇರಿ ಉದ್ಘಾಟನೆ ಮಾಡಿದ್ದೇ ಅವರು. ಅಲ್ಲೇ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಪ್ರತಿಯೊಬ್ಬ ನಾಗರೀಕನೂ ಕಾನೂನು ಪಾಲಿಸಬೇಕು ಎಂದರು. (ಕೆ.ಎಸ್,ಎಸ್.ಎಚ್)