ದೇಶ

ಪ್ರಿಯಾಂಕಾ ಚೋಪ್ರಾ ವಿರುದ್ಧ ದೂರು ನೀಡಿದ ಪಾಕ್ ಗೆ ಮುಖಭಂಗ

ನವದೆಹಲಿ,ಆ.23-ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವಿರುದ್ಧ ವಿಶ್ವಸಂಸ್ಥೆಗೆ ದೂರು ನೀಡಿದ್ದ ಪಾಕಿಸ್ತಾನಕ್ಕೆ ಮುಖಭಂಗವಾಗಿದೆ.

ಯೂನಿಸೆಫ್ ನ ಸೌಹಾರ್ದಯುತ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಿಯಾಂಕಾ ಚೋಪ್ರಾ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವ ಶಿರೀನ್ ಮಝಾತಿ ವಿಶ್ವಸಂಸ್ಥೆಗೆ ಪತ್ರ ಬರೆದಿದ್ದರು.

ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವ ಶಿರೀನ್ ಮಝಾರಿ ವಿಶ್ವಸಂಸ್ಥೆಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆಯ ವಕ್ತಾರ, ಪ್ರಿಯಾಂಕಾ ಚೋಪ್ರಾ ಅವರಿಗೆ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ ಎಂದು ಪಾಕಿಸ್ತಾನದ ಮನವಿಯನ್ನ ತಿರಸ್ಕರಿಸಿದೆ.

ಯುನಿಸೆಫ್ ನ ಸೌಹಾರ್ದಯುತ ರಾಯಭಾರಿಗಳು ತಾವು ಆಸಕ್ತಿ ಹೊಂದಿರುವ ಹಾಗೂ ಕಾಳಜಿ ಹೊಂದಿರುವ ವಿಷಯಗಳ ಬಗ್ಗೆ ಸ್ವಂತ ಸಾಮರ್ಥ್ಯದಲ್ಲಿ ಮಾತನಾಡುವ ಹಕ್ಕು ಹೊಂದಿದ್ದಾರೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯಾ ಗುಟರೆಸ್ ಅವರ ವಕ್ತಾರ ಸ್ಟೀಫನ್ ಡುಜಾರಿಕ್ ತಮ್ಮ ದಿನನಿತ್ಯದ ಮಾತುಕತೆಯಲ್ಲಿ ತಿಳಿಸಿದ್ದಾರೆ.

ಅವರ ವೈಯಕ್ತಿಕ ದೃಷ್ಟಿಕೋನಗಳು ಮತ್ತು ಕೆಲಸಗಳು ಯುನಿಸೆಫ್ ನ ಅಭಿಪ್ರಾಯಗಳನ್ನ ಪ್ರತಿ ಬಿಂಬಿಸುವುದಿಲ್ಲ. ಯಾವಾಗ ಯುನಿಸೆಫ್ ಗೆ ಸಂಬಂಧ ಪಟ್ಟ ವಿಚಾರಗಳ ಕುರಿತು ಮಾತನಾಡುತ್ತಾರೋ ಆಗ ಅವರು ಯುನಿಸೆಫ್ ನ  ಬದ್ಧತೆಗಳಿಗೆ ಬದ್ಧವಾಗಿರಬೇಕು. ಯೂನಿಸೆಫ್ ನ ಸೌಹಾರ್ದಯುತ ರಾಯಭಾರಿಗಳು ಮಕ್ಕಳ ಕಲ್ಯಾಣ ಅಭಿವೃದ್ಧಿಯ ಕಾರಣಕ್ಕಾಗಿ ತಮ್ಮ ವೈಯಕ್ತಿಕ ಸಮಯ ಮತ್ತು ಖ್ಯಾತಿಯನ್ನ ನೀಡಿರುವಂತ ವ್ಯಕ್ತಿಗಳಾಗಿರುತ್ತಾರೆ. ಅವರ ಬಗ್ಗೆ ಗೌರವವಿದೆ ಎಂದು ಹೇಳಿದ್ದಾರೆ.

ಪ್ರಿಯಾಂಕಾ ಚೋಪ್ರಾ ಕಾಶ್ಮೀರದ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನ ಬೆಂಬಲಿಸಿದ್ದರು. ”ಜೈ ಹಿಂದ್, ಇಂಡಿಯನ್ ಆರ್ಮಿ ಫೋರ್ಸ್” ಎಂದು ಟ್ವಿಟ್ ಮಾಡಿ ಭಾರತದ ಧ್ವಜ ಮತ್ತು ನಮಸ್ತೆಯ ಎಮೋಜಿಗಳನ್ನ ಹಾಕಿದ್ದರು. ಇದೇ ವಿಚಾರದಲ್ಲಿ ಅಮೆರಿಕನ್ ಟಿವಿ ಸಂದರ್ಶನವೊಂದರಲ್ಲಿ ಪ್ರಶ್ನಿಸಿದ್ದಾಗಲೂ, ಕೇಂದ್ರ ಸರ್ಕಾರದ ಕ್ರಮವನ್ನ ಸಮರ್ಥಿಸಿಕೊಂಡಿದ್ದರು.

ಪ್ರಿಯಾಂಕಾ ಅವರ ಈ ಮಾತು ಮತ್ತು ನಡೆಯನ್ನ ಖಂಡಿಸಿದ್ದ ಪಾಕಿಸ್ತಾನ ರಕ್ಷಣ ಇಲಾಖೆ, ಪ್ರಿಯಾಂಕಾ ಚೋಪ್ರಾ ವಿರುದ್ಧ ಕ್ರಮ ಜರುಗಿಸಬೇಕು, ಯುನಿಸೆಫ್ ನಲ್ಲಿ ಅವರು ಹೊಂದಿರುವ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದರು. ಅಂತಿಮವಾಗಿ ಈ ಮನವಿ ತಿರಸ್ಕಾರಗೊಂಡಿದೆ. (ಎಂ.ಎನ್)

Leave a Reply

comments

Related Articles

error: