ಪ್ರಮುಖ ಸುದ್ದಿಮೈಸೂರು

ಬ್ರಾಹ್ಮಣ ಮಹಾಸಭಾದಿಂದ ಉಗ್ರಾಣ ನಿಗಮ ನಿರ್ದೇಶಕ ಡಾ.ಜಿ.ರವಿರವರ ಅಭಿನಂದನೆ

ಮೈಸೂರು,ಆ.23 : ರಾಜ್ಯ ಉಗ್ರಾಣ ನಿಗಮದ ನಿರ್ದೇಶಕರಾಗಿ ಆಯ್ಕೆಯಾಗಿರುವ ಡಾ.ಜಿ.ರವಿ ಅವರ ನಾಗರೀಕ ಅಭಿನಂದನಾ ಸಮಾರಂಭವನ್ನು ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಆಯೋಜಿಸಲಾಗಿದೆ ಎಂದು ಸಭಾದ ಜಿಲ್ಲಾಧ್ಯಕ್ಷರಾದ ಡಾ.ಬಿ.ಆರ್.ನಟರಾಜ್ ಜೋಯಿಸ್ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆ.25ರ ಸಂಜೆ 4 ಗಂಟೆಗೆ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ನಡೆಯುವ ನಾಗರೀಕ ಸನ್ಮಾನ ಸಮಾರಂಭದಲ್ಲಿ ಸಾಹಿತಿ, ಪತ್ರಕರ್ತೆ ಮ.ನ.ಲತಾ ಮೋಹನ್, ಸಮೂಹ ಸಂಸ್ಥೆಗಳ ಮುಖ್ಯಸ್ಥ ಅನಂತ ಪ್ರಸಾದ್ ಹಾಗೂ ಸಮಾಜದ ಗಣ್ಯರು ಹಾಜರಿರಲಿದ್ದಾರೆ ಎಂದರು.

ನಂತರ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಉಪಸ್ಥಿತಿಯಲ್ಲಿ ಪುರುಷೋತ್ತಮ್ ಮತ್ತು ಸಂಗಡಿಗರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ವಿಪ್ರ ಮುಖಂಡರಾದ ರಘುರಾಂ ವಾಜಪೇಯಿ, ಜಿ.ಆರ್.ವಿದ್ಯಾರಣ್ಯ, ಲತಾ ಮೋಹನ್, ವಿಜಯಲಕ್ಷ್ಮಿ ಮೊದಲಾದವರು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: