ಕ್ರೀಡೆಪ್ರಮುಖ ಸುದ್ದಿಮೈಸೂರು

ಕರ್ನಾಟಕ ಪ್ರೀಮಿಯರ್ ಲೀಗ್ ನ ಟಿ-20ಟೂರ್ನಿಯ ಇತರ ಹತ್ತು ಪಂದ್ಯ ಮೈಸೂರಿನಲ್ಲಿ ಆ.25ರಿಂದ ಆರಂಭ

ಕೆಎಸ್ ಸಿಎಗಾಗಿ ನಾವು ಯಾವುದೇ ರೀತಿಯ ನೆರವು ನೀಡಲು ಸಿದ್ದರಿದ್ದೇವೆ : ರಾಜಮಾತೆ ಪ್ರಮೋದಾದೇವಿ ಒಡೆಯರ್

ಮೈಸೂರು,ಆ.23:- ಕೆಎಸ್ ಸಿಎಯ ಕಾರ್ಯವೈಖರಿ ಖುಷಿ ಕೊಟ್ಟಿದ್ದು, ಕೆಎಸ್ ಸಿಎಗಾಗಿ ನಾವು ಯಾವುದೇ ರೀತಿಯ ನೆರವು ನೀಡಲು ಸಿದ್ದರಿದ್ದೇವೆ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.

ಅವರಿಂದು ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಕೆಪಿಎಲ್ ಎರಡನೇ ಹಂತದ ಪಂದ್ಯಗಳು ಮೈಸೂರಿನಲ್ಲಿ ನಡೆಯಲಿದ್ದು, ಈ ಕುರಿತು ನಡೆದ  ಟ್ರೋಫಿ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು ನನ್ನ ಪತಿ ಕ್ರಿಕೆಟ್ ನ್ನು ತುಂಬಾ ಪ್ರೀತಿಸುತ್ತಿದ್ದರು. ಅವರು ಕ್ರೀಡೆಯ ಬಗ್ಗೆ ಗಾಢವಾದ ಅನುರಕ್ತತೆ ಹೊಂದಿದ್ದರು. ಆದರೆ ಕ್ರಿಕೆಟ್ ಬಗ್ಗೆ ಇನ್ನೂ ಹೆಚ್ಚಿನ ಪ್ರೀತಿ ಅವರಲ್ಲಿತ್ತು. ಕ್ರಿಕೆಟ್ ಬಗ್ಗೆ ಇರುವ ಅತಿಯಾದ  ಪ್ರೀತಿ ಮತ್ತು ಕಾಳಜಿಯೇ ಅವರು ಎರಡನೇ ಬಾರಿಗೆ ಕೆಎಸ್ ಸಿಎ ಅಧ್ಯಕ್ಷರಾಗಲು ಕಾರಣವಾಯಿತು. ಅವರ ಹೆಸರಿನಲ್ಲಿ ಟೂರ್ನಿಯನ್ನು ನಡೆಸುತ್ತಿರುವುದು ನನಗೆ ಖುಷಿಕೊಟ್ಟ ಸಂಗತಿಯಾಗಿದ್ದು, ಅತ್ಯಂತ ಹತ್ತಿರದಿಂದ ಈ ಪಂದ್ಯಗಳನ್ನು ವೀಕ್ಷಿಸುತ್ತಿದ್ದೇನೆ ಎಂದರು.

ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಸುಧಾಕರ್ ರಾವ್ ಮಾತನಾಡಿ ಆ.25ರಿಂದ 31ರವರೆಗೆ ಮೈಸೂರು ವಿವಿಯ ಗ್ಲೇಡ್ಸ್ ಮೈದಾನದಲ್ಲಿ ದೇಶದ ಪ್ರತಿಷ್ಠಿತ ಟಿ-20ಟೂರ್ನಿಯ ಇತರ ಹತ್ತು ಪಂದ್ಯಗಳು ನಡೆಯಲಿದ್ದು, ಆ.31ರಂದು ಫೈನಲ್ ಪಂದ್ಯ ನಡೆಯಲಿದೆ. ಇದುವರೆಗೂ ಟೂರ್ನಿ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಮೈಸೂರಿನ ಜನತೆ ಕೂಡ ಕ್ರಿಕೆಟ್ ನ್ನು ಪ್ರೀತಿಸುತ್ತಾರೆ. ಆದ್ದರಿಂದ ನಾವು ಇಲ್ಲಿ ಪಂದ್ಯಗಳನ್ನು ಆರಂಭಿಸಲು ಉತ್ಸುಕರಾಗಿದ್ದೇವೆ ಎಂದರು.

ರೆಡ್ಮಿ ಕರ್ನಾಟಕ ಪ್ರೀಮಿಯರ್ ಲೀಗ್ ನ ಎರಡನೇ ಹಾಗೂ ಅಂತಿಮ ಹಂತದ ಪಂದ್ಯಗಳಿಗೆ ಶುಕ್ರವಾರ ಮೈಸೂರಿನಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಲಿದ್ದಾರೆಂದು ತಿಳಿಸಿದರು.

ಈ ಸಂದರ್ಭ ಕೆಪಿಎಲ್ ರಾಯಭಾರಿ, ಚಿತ್ರನಟಿ ರಾಗಿಣಿ ದ್ವಿವೇದಿ, ಮೈಸೂರು ವಾರಿಯರ್ಸ್ ತಂಡದ ನಾಯಕ ಅಮಿತ್ ವರ್ಮಾ, ಜೆ.ಸುಚಿತ್, ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: